ಬಿಹಾರದ ಗ್ರಾಮೀಣ ಪ್ರದೇಶದ ಸತ್ಯಂ ಗಾಂಧಿ ದೆಹಲಿ ವಿವಿಯಲ್ಲಿ ಸೀಟು ಸಿಗುವವರೆಗೂ ಮೋಮೋಗಳು ಮತ್ತು ಸ್ಯಾಂಡ್ವಿಚ್ಗಳ ಬಗ್ಗೆ ಕೇಳಿಯೇ ಇರಲಿಲ್ಲ.
ಆದರೆ ಕರೋಲ್ ಬಾಗ್ನ ಪಿಜಿಯ ಸಣ್ಣ ಕೋಣೆಯೊಂದರಲ್ಲಿ ಕುಳಿತು ಸ್ವಯಂ ಅಧ್ಯಯನ ಮಾಡಿ ಯುಪಿಎಸ್ಸಿಯ ನಾಗರಿಕ ಸೇವಾ ಪರೀಕ್ಷೆಯಲ್ಲಿ 10ನೇ ರ್ಯಾಂಕ್ ಪಡೆದಿದ್ದಾರೆ ಈ ಸತ್ಯಂ.
ಕೇವಲ 22 ವರ್ಷ ವಯಸ್ಸಿನ ಸತ್ಯಂ ಒಂದು ವರ್ಷದ ಮಟ್ಟಿಗೆ ಪರೀಕ್ಷೆಗೆ ಸಿದ್ಧತೆ ನಡೆಸಿದ್ದು, ಯಾವುದೇ ತರಬೇತಿ ನೆರವಿಲ್ಲದೇ ಸ್ವಂತ ಪರಿಶ್ರಮದಿಂದಲೇ ಯಶಸ್ಸಿನ ಬಾಗಿಲು ತಟ್ಟಿದ್ದಾರೆ. ಪ್ರತಿನಿತ್ಯ 8-10 ಗಂಟೆಗಳ ನಿರಂತರ ಅಧ್ಯಯನ ತಮ್ಮ ಯಶಸ್ಸಿನ ಗುಟ್ಟೆಂದು ಸತ್ಯಂ ತಿಳಿಸಿದ್ದಾರೆ.
BIG NEWS: ಈಗಷ್ಟೇ ಜನರು ಚೇತರಿಸಿಕೊಳ್ಳುತ್ತಿರುವಾಗ ಬಂದ್ ಮಾಡಿ ತೊಂದರೆ ಕೊಡುವುದು ಸರಿಯಲ್ಲ; ಪ್ರತಿಭಟನಾಕಾರರಿಗೆ ಸಿಎಂ ಮನವಿ
ದೆಹಲಿಯಲ್ಲಿ ತನ್ನ ಅಧ್ಯಯನಕ್ಕೆ ಸಾಲ ಪಡೆದ ತಂದೆಯ ಪರಿಶ್ರಮವನ್ನು ಅರಿತ ಸತ್ಯಂ ನಗರ ಜೀವನದ ಸೋಂಕು ತನಗೆ ತಗುಲದಂತೆ ನೋಡಿಕೊಂಡು, ಏಕಾಗ್ರತೆಯಿಂದ ಪರೀಕ್ಷೆಗೆ ಸಜ್ಜಾಗಿದ್ದಾರೆ. ಜೀವನದಲ್ಲಿ ಕಷ್ಟದ ದಿನಗಳನ್ನು ನೋಡಿದ ಕಾರಣ ಪ್ರಬುದ್ಧತೆ ಬಂದಿದೆಯೆಂದು ಸತ್ಯಂ ಹೇಳಿದ್ದಾರೆ.
ನಾಗರಿಕ ಸೇವಾ ಪರೀಕ್ಷೆಯಲ್ಲಿ 10ನೇ ರ್ಯಾಂಕ್ ಪಡೆದ ಬಳಿಕ ಕೊನೆಗೂ ಬ್ರೇಕ್ ಪಡೆದು ತನ್ನ ಹೆತ್ತವರನ್ನು ಭೇಟಿಯಾಗುವುದಾಗಿ ಸತ್ಯಂ ತಿಳಿಸಿದ್ದಾರೆ.
ಬಿಹಾರ ಕೇಡರ್ ಸಿಗುವ ಭರವಸೆ ಹೊಂದಿರುವ ಸತ್ಯಂ ಐಎಎಸ್ ಆದಲ್ಲಿ ಗ್ರಾಮೀಣ ಪ್ರದೇಶದ ಸಮಸ್ಯೆಗಳನ್ನು ಪರಿಹರಿಸಲು ಯತ್ನಿಸುವ ಆಶಯ ಹೊಂದಿದ್ದಾರೆ.