
ಕಾಮಿಡಿ ಆಕ್ಷನ್ ಹಾಗೂ ರೊಮ್ಯಾಂಟಿಕ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ದಿಗಂತ್ ಸೇರಿದಂತೆ ಧನ್ಯ ರಾಮ್ ಕುಮಾರ್, ರಂಗಾಯಣ ರಘು, ಶರ್ಮಿಳಾ ಮಾಂಡ್ರೆ, ರಂಗಾಯಣ ರಘು, ಅನಿರುದ್ಧ ಆಚಾರ್ಯ, ಗೋಪಾಲಕೃಷ್ಣ ದೇಶಪಾಂಡೆ, ರವಿಶಂಕರ್ ಗೌಡ, ಹುಲಿ ಕಾರ್ತಿಕ್, ತಾರಾ ಬಳಗದಲ್ಲಿದ್ದಾರೆ. krg ಸ್ಟುಡಿಯೋಸ್ ಬ್ಯಾನರ್ ನಡಿ ಕಾರ್ತಿಕ್ ಗೌಡ, ಯೋಗಿ ಜಿ ರಾಜ್, ವಿಜಯ್ ಸುಬ್ರಮಣ್ಯಂ ಬಂಡವಾಳ ಹೂಡಿದ್ದಾರೆ. ಎನ್ ಹರಿಕೃಷ್ಣ ಹಾಗೂ ಗೌತಮ್ ಪಲ್ಲಕ್ಕಿ ಸಂಕಲನ, ತ್ರಿಲೋಕ್ ತ್ರಿ ವಿಕ್ರಂ ಸಂಭಾಷಣೆ, ಹಾಗೂ ಅರ್ಜುನ್ ರಾಜ್ ಸಾಹಸ ನಿರ್ದೇಶನವಿದೆ. ವಾಸುಕಿ ವೈಭವ್ ಸಂಗೀತ ಸಂಯೋಜನೆ ನೀಡಿದ್ದಾರೆ.