ಬೆಂಗಳೂರು: ಕೃಷಿ ಭೂಮಿಯಲ್ಲಿ ಕೋಳಿ ಸಾಕಾಣಿಕೆ ವಾಣಿಜ್ಯ ಚಟುವಟಿಕೆಯಲ್ಲ, ಹೀಗಾಗಿ ಗ್ರಾಮ ಪಂಚಾಯಿತಿ ವಾಣಿಜ್ಯ ಕಟ್ಟಡ ಎಂದು ತೆರಿಗೆ ವಿಧಿಸುವಂತಿಲ್ಲ ಎಂದು ಹೈಕೋರ್ಟ್ ಏಕ ಸದಸ್ಯ ಪೀಠದಿಂದ ಆದೇಶ ನೀಡಲಾಗಿದ್ದು, ತೆರಿಗೆಯನ್ನು ಹಿಂತಿರುಗಿಸಲು ಗ್ರಾಪಂಗೆ ಸೂಚಿಸಿದೆ.
ಕೋಳಿ ಸಾಕಾಣಿಕೆಗೆ ಕೃಷಿ ಭೂಮಿ ಪರಿವರ್ತನೆ ಅಗತ್ಯವಿಲ್ಲ. ಕೃಷಿ ಭೂಮಿಯಲ್ಲಿರುವ ಕೋಳಿ ಸಾಕಾಣಿಕೆ ಕಟ್ಟಡ ವಾಣಿಜ್ಯ ಕಟ್ಟಡವಾಗುವುದಿಲ್ಲ ಎಂದು ಹೈಕೋರ್ಟ್ ಹೇಳಿದೆ. ಹೀಗಾಗಿ ವಾಣಿಜ್ಯ ಕಟ್ಟಡ ಎಂದು ತೆರಿಗೆ ವಿಧಿಸುವಂತಿಲ್ಲ ಎಂದು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಹೈಕೋರ್ಟ್ ಪೀಠ ಆದೇಶ ನೀಡಿದೆ.
ನರಸಿಂಹಮೂರ್ತಿ ಎಂಬುವವರು ನಿರಾಕ್ಷೇಪಣಾ ಪತ್ರ ಕೋರಿದ್ದರು. ಸೊಂಡೆಕೊಪ್ಪ ಗ್ರಾಮ ಪಂಚಾಯಿತಿಗೆ 59,551 ರೂಪಾಯಿ ತೆರಿಗೆ ಪಾವತಿಸಿದ್ದರು. ಹಣ ಹಿಂತಿರುಗಿಸಲು ಸೊಂಡೆಕೊಪ್ಪ ಗ್ರಾಮ ಪಂಚಾಯಿತಿಗೆ ಹೈಕೋರ್ಟ್ ಆದೇಶ ನೀಡಿದೆ.