ಬೆಂಗಳೂರಿನಲ್ಲಿ ಗುಂಡಿ ಸಮಸ್ಯೆ ಕಾಮನ್, ಪ್ರತಿ ನಿತ್ಯ ಒಂದಿಲ್ಲ ಒಂದು ರಸ್ತೆಯಲ್ಲಿ ಗುಂಡಿಗಳ ದರ್ಶನ ಆಗುತ್ತಲೇ ಇರುತ್ತೆ. ಎಷ್ಟೋ ಜನರು ಈ ಗುಂಡಿಯಿಂದಾಗಿ ಕೈ-ಕಾಲು ಮುರಿದುಕೊಂಡಿದ್ದಾರೆ. ಇನ್ನು ಕೆಲವರು ಈ ಗುಂಡಿಗಳಿಂದಾಗಿ ಜೀವವನ್ನೇ ಕಳೆದುಕೊಂಡಿದ್ದಾರೆ. ಈಗ ಬೆಂಗಳೂರನ್ನ ಈ ಗುಂಡಿ ಸಮಸ್ಯೆಯಿಂದ ಮುಕ್ತಿ ಹೇಳುವುದಕ್ಕೆ ಬಿಬಿಎಂಪಿಯ ಸಹಾಯಕ ಎಂಜಿನಿಯರ್ಗಳು ಹಾಗೂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ಗಳಿಗೆ ಜವಾಬ್ದಾರಿ ನೀಡಲಾಗಿದೆ.
ಬೆಂಗಳೂರು ನಗರದಲ್ಲಿರುವ ಗುಂಡಿ ಸಮಸ್ಯೆಯನ್ನ ಈಗಾಗಲೇ ಬಿಬಿಎಂಪಿಯ ಗಮನಕ್ಕೆ ತರಲಾಗಿದೆ. ಇಂತಹ ಸಮಸ್ಯೆಗಳಿಗೆಂದೇ ಈಗ ‘ಫಿಕ್ಸ್ ಮೈ ಸ್ಟ್ರೀಟ್‘ ಅನ್ನೊ ಮೊಬೈಲ್ ಅಪ್ಲಿಕೇಶನ್ ಒಂದನ್ನ ಕ್ರಿಯೇಟ್ ಮಾಡಲಾಗಿದೆ. ಈ ಅಪ್ಲಿಕೇಶನ್ ಮೂಲಕ ನಾಗರಿಕರು ಗುಂಡಿಗಳಿಗೆ ಸಂಬಂಧಿಸಿದ ದೂರುಗಳನ್ನ ದಾಖಲಿಸಬಹುದು. ಬಿಬಿಎಂಪಿ ಮುಖ್ಯ ಆಯುಕ್ತರಾಗಿರೋ ತುಷಾರ್ ಗಿರಿನಾಥ್ ಈ ಕುರಿತು ಬಿಬಿಎಂಪಿ ಎಂಜಿನಿಯರ್ಗಳೊಂದಿಗೆ ಸಭೆ ನಡೆಸಿ. ಗುಂಡಿ ಸಮಸ್ಯೆ ಕುರಿತಾಗಿ ದೂರು ಬಂದ ತಕ್ಷಣ ಕ್ರಮ ಕೈಗೊಳ್ಳಬೇಕು ಅಂತ ವಲಯ ಎಂಜಿನಿಯರ್ಸಗಳಿಗೆ ಸೂಚನೆ ಕೊಟ್ಟಿದ್ದಾರೆ.
ಬುರ್ಖಾ ಕಡ್ಡಾಯ ವಿರುದ್ಧ ಬೀದಿಗಿಳಿದ ಅಫ್ಘಾನಿಸ್ತಾನ ಮಹಿಳೆಯರು
ಈಗಾಗಲೇ ಸ್ವಯಂಚಾಲಿತ ಗುಂಡಿಗಳನ್ನ ತುಂಬುವ ಯಂತ್ರಗಳನ್ನ ಉಪಯೋಗಿಸಲಾಗುತ್ತಿದೆ. ಇವು 180 ಕಿ.ಮೀ ಮುಖ್ಯ ರಸ್ತೆಗಳನ್ನ ದುರಸ್ತಿ ಮಾಡುವಷ್ಟು ಸಾಮರ್ಥ್ಯ ಹೊಂದಿದೆ. ಈಗ ಮುಖ್ಯರಸ್ತೆಯಲ್ಲಿರೋ ಗುಂಡಿ ದುರಸ್ತಿಗೆ ಪೈಥಾನ್ ಬಳಸಲಾಗುತ್ತಿದೆ. ಇನ್ನೂ ಉಳಿದ ರಸ್ತೆಗಳ ಗುಂಡಿಗಳ ದುರಸ್ತಿಗೆ ಬಿಬಿಎಂಪಿ ಬ್ಯಾಚ್ ಮಿಕ್ಸ್ ಪ್ಲಾಂಟ್ ಬಳಸಲಾಗುವುದು.
ಈಗಾಗಲೇ ಗುಂಡಿ ದುರಸ್ತಿ ಕುರಿತು ಕ್ರಮಗಳನ್ನ ತೆಗೆದುಕೊಂಡಿದ್ದು, ಬಿಬಿಎಂಪಿ ಎಂಜಿನಿಯರ್ಸ್ ಆದಷ್ಟು ಬೇಗ ಉಳಿದ ಗುಂಡಿಗಳ ಸಮಸ್ಯೆಗಳನ್ನ ಬಗೆಹರಿಸುವತ್ತ ಗಮನ ಹರಿಸುತ್ತಿದ್ದಾರೆ. ಈಗ ನಾಗರಿಕರು ಸಹ ಅಪ್ಲಿಕೇಶನ್ ಮೂಲಕ ದೂರು ದಾಖಲಿಸುವುದರಿಂದ ಗುಂಡಿಗಳ ಸಮಸ್ಯೆ ಹೆಚ್ಚು ಹೆಚ್ಚಾಗಿ ಗಮನಕ್ಕೆ ಬರುತ್ತಿದ್ದು. ಅವು ದುರಸ್ತಿಗೆ ಅನುಕೂಲವಾಗುತ್ತಿದೆ.