ತಾಯಿಯಾಗೋದು ಜಗತ್ತಿನ ಅತ್ಯಂತ ಸುಂದರ ಅನುಭವಗಳಲ್ಲಿ ಒಂದು. ಪ್ರತಿಯೊಬ್ಬ ಮಹಿಳೆಯೂ ತಾಯಿಯಾದ ಬಳಿಕ ಈ ಸುಂದರ ಕ್ಷಣವನ್ನು ಅನುಭವಿಸುತ್ತಾಳೆ. ಆದರೆ ಗರ್ಭಿಣಿ ಹಾಗೂ ಬಾಣಂತಿಯಾದ ಸಂದರ್ಭದಲ್ಲಿ ಮಹಿಳೆಯ ದೇಹದಲ್ಲಿ ತುಂಬಾನೇ ಬದಲಾವಣೆಗಳು ಆಗುತ್ತವೆ. ಇದರಿಂದ ತ್ವಚೆಯ ಆರೋಗ್ಯ ಸಂಪೂರ್ಣ ಕೆಡುವ ಸಾಧ್ಯತೆಯೂ ಹೆಚ್ಚಿರುತ್ತದೆ. ಇಂತಹ ಸಂದರ್ಭದಲ್ಲಿ ಬಾಣಂತಿ ಯಾವೆಲ್ಲ ಮನೆಮದ್ದು ತಯಾರು ಮಾಡಬಹುದು ಅನ್ನೋದಕ್ಕೆ ಇಲ್ಲಿದೆ ಮಾಹಿತಿ.
ಕೂದಲು ಉದುರೋದು ಈ ಸಮಯದಲ್ಲಿ ಬರುವ ಸಾಮಾನ್ಯ ಸಮಸ್ಯೆಗಳಲ್ಲಿ ಒಂದು. ಇದಕ್ಕಾಗಿ ನೀವು ವಾರದಲ್ಲಿ ಎರಡು ಬಾರಿಯಾದರೂ ಕೊಬ್ಬರಿ ಎಣ್ಣೆ ಹಚ್ಚಿ ತಲೆಗೆ ಚೆನ್ನಾಗಿ ಮಸಾಜ್ ಮಾಡಿ.
ಡಾರ್ಕ್ ಸರ್ಕಲ್, ಸ್ಟ್ರೆಚ್ ಮಾರ್ಕ್ಗಳು ಇರುವ ಸ್ಥಳದಲ್ಲಿ ಆಲೂಗಡ್ಡೆಯ ಜ್ಯೂಸ್ನ್ನು ಹಚ್ಚಿ. ಇದರಿಂದ ಒಳ್ಳೆಯ ಫಲಿತಾಂಶ ಸಿಗಲಿದೆ.
ಮೊಡವೆ ಸಮಸ್ಯೆಯನ್ನ ಹೊಂದಿರುವವರಿಗೆ ಬೇಕಿಂಗ್ ಸೋಡಾ ಉತ್ತಮ ಫಲಿತಾಂಶ ನೀಡಲಿದೆ. ನೀರಿನಲ್ಲಿ ಬೇಕಿಂಗ್ ಸೋಡಾ ಮಿಶ್ರಣ ಮಾಡಿ ಪೇಸ್ಟ್ ಮಾಡಿಕೊಳ್ಳಿ. ಇದನ್ನ ಮುಖಕ್ಕೆ ಹಚ್ಚಿ ಒಣಗುವವರೆಗೂ ಹಾಗೆಯೇ ಬಿಟ್ಟು ಬಳಿಕ ಬೆಚ್ಚನೆಯ ನೀರಿನಲ್ಲಿ ಮುಖ ತೊಳೆದುಕೊಳ್ಳಿ.
ಇವೆಲ್ಲದರ ಜೊತೆ ಮುಖವನ್ನ ಮಾಯಶ್ಚುರೈಸ್ ಮಾಡೋದನ್ನೂ ಮರೆಯಬಾರದು. ಇದಕ್ಕಾಗಿ ನೀವು ಕಡ್ಲೆ ಹಿಟ್ಟಿನಲ್ಲಿ ಮುಖ ತೊಳೆಯಿರಿ.