alex Certify ವಾಹನ ಹೊಂದಿರುವವರಿಗೆ ಖುಷಿ ಸುದ್ದಿ: ಇನ್ಮುಂದೆ ಮನೆ ಬಾಗಿಲಲ್ಲೇ ಲಭ್ಯವಾಗಲಿದೆ ಈ ಸೇವೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಾಹನ ಹೊಂದಿರುವವರಿಗೆ ಖುಷಿ ಸುದ್ದಿ: ಇನ್ಮುಂದೆ ಮನೆ ಬಾಗಿಲಲ್ಲೇ ಲಭ್ಯವಾಗಲಿದೆ ಈ ಸೇವೆ

ಕೊರೊನಾ ಮಹಾಮಾರಿ ಮಧ್ಯೆ ಅಂಚೆ ಕಚೇರಿ ವಿಶೇಷ ಸೌಲಭ್ಯವನ್ನು ಜಾರಿಗೆ ತರ್ತಿದೆ. ಮುಂದಿನ ವಾರ ಅಂಚೆ ಕಚೇರಿ ಈ ಸೌಲಭ್ಯವನ್ನು ಜಾರಿಗೆ ತರಲಿದೆ. ಅಂಚೆ ಕಚೇರಿಯ ಈ ವಿಶೇಷ ಸೌಲಭ್ಯದಡಿ, ಮನೆಯಲ್ಲೇ ಕುಳಿತು ಬೈಕ್ ಮತ್ತು ಕಾರ್ ವಿಮೆ ಮಾಡುವ ಅವಕಾಶ ಸಿಗಲಿದೆ. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಪೋಸ್ಟ್ ಮ್ಯಾನ್ ಮನೆಗೆ ಬರುತ್ತಾರೆ. ಅಗತ್ಯವಾದ ದಾಖಲೆಗಳನ್ನು ನೀಡಿದ ನಂತ್ರ ಬೈಕ್ ಮತ್ತು ಕಾರ್ ವಿಮೆ ಸಿಗಲಿದೆ.

ಈ ವಿಶೇಷ ಸೌಲಭ್ಯವನ್ನು ಸಾಮಾನ್ಯ ಜನರಿಗೆ ನೀಡಲು ಅಂಚೆ ಕಚೇರಿ, ಎರಡು ವಿಮಾ ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಅಂಚೆ ಕಚೇರಿ ಅಧಿಕಾರಿಯೊಬ್ಬರ ಪ್ರಕಾರ, ಪ್ರಸ್ತುತ ಈ ಸೌಲಭ್ಯದ ಪ್ರಯೋಜನವನ್ನು ಪ್ರಯಾಗರಾಜ್ ಮತ್ತು ಕೌಶಂಬಿಯಲ್ಲಿ ನೀಡಲಾಗುವುದು. ಈ ಸೌಲಭ್ಯ ಇಲ್ಲಿ ಯಶಸ್ವಿಯಾದರೆ ನಂತರ ಇತರ ನಗರಗಳಲ್ಲಿ ಇದನ್ನು ವಿಸ್ತರಿಸಲಾಗುವುದು.

ಈ ಸೌಲಭ್ಯದ ಪ್ರಯೋಜನ ಪಡೆಯಲು ಹತ್ತಿರದ ಅಂಚೆ ಕಚೇರಿಗೆ ಹೋಗಬೇಕು. ಇಲ್ಲವೆ 155299 ಗೆ ಕರೆ ಮಾಡಬೇಕು. ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕಿನಲ್ಲಿ ಖಾತೆಯನ್ನು ಹೊಂದಿರುವವರಿಗೆ ಈ ಸೌಲಭ್ಯ ಸಿಗಲಿದೆ. ವಿಮಾ ಪಾಲಿಸಿಯ ಪ್ರೀಮಿಯಂ ಮತ್ತು ಅದರ ಖರ್ಚುಗಳನ್ನು ಅದರ ಖಾತೆಯಿಂದಲೇ ಪಾವತಿಸಲಾಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...