ಹೈದರಾಬಾದ್: ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರೂ ಸ್ವೀಪರ್ (ಕಸ ಗುಡಿಸುವುದು) ಆಗಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಸಹಾಯಕ ಕೀಟಶಾಸ್ತ್ರಜ್ಞರ ಹುದ್ದೆ ನೀಡಲಾಗಿದೆ.
ಪೌರಾಡಳಿತ ಸಚಿವ ಕೆ.ಟಿ. ರಾಮರಾವ್ ಅವರು ಸೋಮವಾರ ಆಕೆಗೆ ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್‌ಎಂಸಿ) ಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಸಹಾಯಕ ಕೀಟಶಾಸ್ತ್ರಜ್ಞರ ಹುದ್ದೆ ನೀಡಿದ್ದಾರೆ.
ಬಿಜೆಪಿ ಶಾಸಕನ ತಾಯಿ ಸೇರಿ 20 ಸಾವಿರ ಮಂದಿ ಮತಾಂತರ
ಎಮ್.ಎಸ್ಸಿ (ಸಾವಯವ ರಸಾಯನಶಾಸ್ತ್ರ) ಮಾಡಿದ ಎ.ರಜನಿ ಅವರು ಜಿಎಚ್‌ಎಂಸಿಯಲ್ಲಿ ಗುತ್ತಿಗೆ ಆಧಾರದಲ್ಲಿ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದರು. ತೆಲುಗಿನ ಪ್ರಮುಖ ದಿನಪತ್ರಿಕೆಯಲ್ಲಿ ಮಹಿಳೆಯ ಬಗ್ಗೆ ವರದಿ ಪ್ರಕಟವಾಗಿತ್ತು. ಇದನ್ನು ಗಮನಿಸಿದ ಸಚಿವರು, ಆಕೆಯ ಅರ್ಹತೆಗೆ ಅನುಗುಣವಾಗಿ ಕೆಲಸ ನೀಡಿದ್ದಾರೆ.
ಇಬ್ಬರು ಹೆಣ್ಣುಮಕ್ಕಳಿರುವ ರಜನಿ ಅವರಿಗೆ ಸಚಿವರು ಎಲ್ಲ ಬೆಂಬಲ ನೀಡುವುದಾಗಿ ಭರವಸೆ ನೀಡಿ, ಕೀಟಶಾಸ್ತ್ರ ವಿಭಾಗದಲ್ಲಿ ಸಹಾಯಕ ಕೀಟಶಾಸ್ತ್ರಜ್ಞರ ಹುದ್ದೆ ನೀಡಿದ್ದಾರೆ. ಈ ವೇಳೆ ರಜನಿ ಅವರು ಭಾವುಕರಾಗಿದ್ದಾರೆ.