ಬೆಂಗಳೂರು: ಸಾರ್ವಜನಿಕರು, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಅಂಚೆ ಕಚೇರಿ ಅವಧಿ ವಿಸ್ತರಿಸಲಾಗಿದೆ. ಬೆಂಗಳೂರು ಪಶ್ಚಿಮ ವಿಭಾಗದ ಎಲ್ಲಾ ಕಚೇರಿಗಳಲ್ಲಿ ವ್ಯವಹಾರದ ಅವಧಿ ವಿಸ್ತರಿಸಲಾಗಿದೆ.
ಕಚೇರಿ ಮುಕ್ತಾಯದ ಅವಧಿವರೆಗೆ ಚೆಕ್ ಬುಕ್, ಎಟಿಎಂ ಕಾರ್ಡ್ ವಿತರಣೆ, ಪ್ಯಾನ್, ಆಧಾರ್, ಮೊಬೈಲ್ ಸಂಖ್ಯೆ, ವಿಳಾಸ, ಖಾತೆ ನವೀಕರಣ ಇತರೆ ಸೌಲಭ್ಯಗಳನ್ನು ನೀಡಲಾಗುವುದು. ಕಚೇರಿ ಮುಕ್ತಾಯದ 30 ನಿಮಿಷ ಮೊದಲು ರಿಜಿಸ್ಟರ್, ಸ್ಪೀಡ್ ಪೋಸ್ಟ್, ಇಎಂಒ ಸೇವೆಗಳು, ಇಪಿಒ ಸೇವೆಗಳು, ಇ ಪೇಮೆಂಟ್, ಬಿಲ್ ಪಾವತಿ, ಆಧಾರ್, ಸಿ.ಎಸ್.ಸಿ. ವಹಿವಾಟು, ಪಿಎಲ್ಐ, ಆರ್.ಪಿ.ಎಲ್.ಐ. ಸೇವೆಗಳು, ಅಂಚೆ ಚೀಟಿ, ಲೇಖನ ಸಾಮಗ್ರಿಗಳ ಮಾರಾಟ ಸೇವೆ ನೀಡಲಾಗುವುದು ಎಂದು ಹೇಳಲಾಗಿದೆ.