ಹೆರಿಗೆ ನಂತ್ರ ತೂಕ ಇಳಿಸಿಕೊಳ್ಳೋದು ಸವಾಲಿನ ಕೆಲಸ. ಗರ್ಭಧಾರಣೆ ನಂತ್ರ ಏರಿದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಅನೇಕ ಮಹಿಳೆಯರು ಬಯಸ್ತಾರೆ. ಆದ್ರೆ ತೂಕ ಇಳಿಸಿಕೊಳ್ಳೋದು ಹೇಳಿದಷ್ಟು ಸುಲಭವಲ್ಲ.
ಕೆಲವೊಂದು ನಿಯಮಗಳನ್ನು ನಿತ್ಯ ಜೀವನದಲ್ಲಿ ರೂಢಿಸಿಕೊಂಡರೆ ಸುಲಭವಾಗಿ ತೂಕ ಇಳಿಸಿಕೊಂಡು ಸೌಂದರ್ಯದ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳಬಹುದು.
ಸ್ತನ್ಯಪಾನ : ವೈದ್ಯರ ಪ್ರಕಾರ ನಿಯಮಿತವಾಗಿ ಸ್ತನ್ಯಪಾನ ಮಾಡಿಸುವವರಿಗೆ ತೂಕ ಇಳಿಸಿಕೊಳ್ಳುವುದು ಸುಲಭ. ಸ್ತನ್ಯಪಾನದಿಂದ ತೂಕ ಕಡಿಮೆಯಾಗುತ್ತದೆ. ಸ್ತನ್ಯಪಾನ ಮಾಡಿಸುವುದರಿಂದ 300 ರಿಂದ 500 ಕ್ಯಾಲೋರಿ ಖರ್ಚಾಗುತ್ತದೆ.
ವಾಕಿಂಗ್ : ಹೆರಿಗೆ ನಂತ್ರ ತೂಕ ಇಳಿಸಿಕೊಳ್ಳ ಬಯಸಿದ್ದರೆ ವಾಕಿಂಗ್ ಶುರುಮಾಡಿ. ಮಕ್ಕಳು ಹಾಗೂ ತಾಯಿ ಕುರಿತು ಅಮೆರಿಕಾದಲ್ಲಿ ನಡೆದ ಸಂಶೋಧನೆಯೊಂದು ವಾಕಿಂಗ್ ಮಾಡುವುದರಿಂದ ತೂಕ ಕಡಿಮಾಯುತ್ತದೆ ಎಂಬ ವಿಷಯವನ್ನು ದೃಢಪಡಿಸಿದೆ.
ಯೋಗ : ನಿಮ್ಮ ತೂಕ ಕಡಿಮೆ ಮಾಡಿಕೊಳ್ಳಲು ಯೋಗ ಅತ್ಯುತ್ತಮ ಉಪಾಯ. ಯೋಗ ಮಾಡುವುದರಿಂದ ತೂಕ ಕಡಿಮೆಯಾಗುವುದೊಂದೇ ಅಲ್ಲ ಮನಸ್ಸು, ಮಾನಸಿಕ ಆರೋಗ್ಯ ಸುಧಾರಿಸುತ್ತೆ. ಯೋಗದಿಂದ ಒತ್ತಡ ಕಡಿಮೆಯಾಗುತ್ತದೆ.
ನೀರು : ನೀರು ತೂಕ ಕಡಿಮೆ ಮಾಡಲು ಸಹಕಾರಿ. ಹೆರಿಗೆ ನಂತ್ರ ತೂಕ ಇಳಿಸಿಕೊಳ್ಳುವ ಇಚ್ಛೆಯಿದ್ದಲ್ಲಿ ಹೆಚ್ಚೆಚ್ಚು ನೀರು ಸೇವನೆ ಶುರುಮಾಡಿ. ಅಮೆರಿಕಾ ಕೆಮಿಕಲ್ ಸೊಸೈಟಿ ಪ್ರಕಾರ ದಿನಕ್ಕೆ 10-12 ಲೋಟ ನೀರು ಸೇವನೆ ಮಾಡುವುದರಿಂದ ತೂಕ ಇಳಿಯಲಿದೆ.
ನಿದ್ರೆ ಮತ್ತು ಆಹಾರ : ನಿದ್ರೆಯ ಕೊರತೆ, ಒತ್ತಡ, ಪೌಷ್ಠಿಕ ಆಹಾರ ಸೇವನೆಯ ಕೊರತೆ ಕೂಡ ತೂಕ ಮತ್ತಷ್ಟು ಹೆಚ್ಚಾಗಲು ಕಾರಣವಾಗುತ್ತದೆ. ಈ ಮೂರರ ಮೇಲೂ ನಿಯಂತ್ರಣ ಹೇರುವುದು ಬಹಳ ಮುಖ್ಯ. ಹೊರಗಿನ ಆಹಾರ ಸೇವನೆಯನ್ನು ಸಂಪೂರ್ಣವಾಗಿ ಬಂದ್ ಮಾಡಿ. ಸಣ್ಣ ಸಣ್ಣ ವಿಚಾರಕ್ಕೆ ತಲೆ ಕೆಡಿಸಿಕೊಳ್ಳಬೇಡಿ.