ಸುರಕ್ಷಿತ ಹೂಡಿಕೆ ಬಹಳ ಮುಖ್ಯ. ಜನರು ಸುರಕ್ಷಿತ ಹೂಡಿಕೆ ಜೊತೆ ಹೆಚ್ಚು ಲಾಭ ಬರುವ ಯೋಜನೆಯ ಹುಡುಕಾಟ ನಡೆಸುತ್ತಾರೆ. ಅಂಥವರಿಗೆ ಅಂಚೆ ಕಚೇರಿ ಯೋಜನೆಗಳು ದಿ ಬೆಸ್ಟ್.
ಅಂಚೆ ಕಚೇರಿ ಟೈಂ ಡೆಪಾಸಿಟ್ : ಅಂಚೆ ಕಚೇರಿಯ ಟೈಂ ಡೆಪಾಸಿಟ್ ನ 1 ವರ್ಷದಿಂದ 3 ವರ್ಷದ ಯೋಜನೆಯಲ್ಲಿ ಶೇಕಡಾ 5.5 ಬಡ್ಡಿ ಸಿಗುತ್ತದೆ. ಇದರಲ್ಲಿ ಹೂಡಿಕೆ ಮಾಡಿದರೆ, ಸುಮಾರು 13 ವರ್ಷಗಳಲ್ಲಿ ಹಣ ದ್ವಿಗುಣಗೊಳ್ಳುತ್ತದೆ. 5 ವರ್ಷಗಳ ಯೋಜನೆ ಠೇವಣಿ ಮೇಲೆ ಶೇಕಡಾ 6.7ರಷ್ಟು ಬಡ್ಡಿ ಸಿಗುತ್ತದೆ.
ಅಂಚೆ ಕಚೇರಿ ಉಳಿತಾಯ ಯೋಜನೆ: ಅಂಚೆ ಕಚೇರಿ ಉಳಿತಾಯ ಖಾತೆಯಲ್ಲಿರುವ ಹಣ ದ್ವಿಗುಣಗೊಳ್ಳಲು ದೀರ್ಘ ಸಮಯ ಕಾಯಬೇಕಾಗುತ್ತದೆ. ವಾರ್ಷಿಕ ಶೇಕಡಾ 4.0ರಷ್ಟು ಬಡ್ಡಿ ಸಿಗಲಿದೆ. 18 ವರ್ಷಗಳಲ್ಲಿ ಹಣ ದ್ವಿಗುಣಗೊಳ್ಳುತ್ತದೆ.
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ : ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆಯಲ್ಲಿ ಪ್ರಸ್ತುತ ಶೇಕಡಾ 6.6ರಷ್ಟು ಬಡ್ಡಿ ಸಿಗ್ತಿದೆ.ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದರೆ, ಶೇಕಡಾ 10.91 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ. ಅಂಚೆ ಕಚೇರಿ ಹಿರಿಯ ನಾಗರಿಕರ ಉಳಿತಾಯ ಯೋಜನೆ : ಅಂಚೆ ಕಚೇರಿ ಹಿರಿಯ ನಾಗರಿಕರ ಉಳಿತಾಯ ಯೋಜನೆಯಲ್ಲಿ ಪ್ರಸ್ತುತ ಶೇಕಡಾ 7.4ರ ಬಡ್ಡಿ ಸಿಗ್ತಿದೆ. ಈ ಯೋಜನೆಯಲ್ಲಿ ಹಣ ಸುಮಾರು 9.73 ವರ್ಷಗಳಲ್ಲಿ ದ್ವಿಗುಣಗೊಳ್ಳುತ್ತದೆ.