ಅಂಚೆ ಸೇವೆಗಳೊಂದಿಗೆ ಸುರಕ್ಷಿತ ಬ್ಯಾಂಕಿಂಗ್ ಸೇವೆಗಳನ್ನೂ ಒದಗಿಸುವ ಭಾರತೀಯ ಅಂಚೆ ನಿಮ್ಮ ಭವಿಷ್ಯದ ಆರ್ಥಿಕ ಸುಭದ್ರತೆಗಾಗಿ ಒಳ್ಳೆಯ ರಿಟರ್ನ್ಸ್ ಕೊಡುವ ಅನೇಕ ಹೂಡಿಕೆಗಳ ಪ್ಲಾನ್‌ಗಳನ್ನು ಕೊಡಮಾಡುತ್ತಾ ಬಂದಿದೆ.
ಇಂಥ ಅನೇಕ ಹೂಡಿಕೆಗಳಲ್ಲಿ ಒಂದು, ಅಂಚೆ ಕಚೇರಿಯ ಸಣ್ಣ ಉಳಿತಾಯ ಯೋಜನೆ. ಯಾವುದೇ ರಿಸ್ಕ್ ಇಲ್ಲದೇ ದೊಡ್ಡ ರಿಟರ್ನ್ಸ್ ಕೊಡಮಾಡುವ ಈ ಯೋಜನೆ ನಿಮಗೆ ಮಾನಸಿಕ ನೆಮ್ಮದಿಯೊಂದಿಗೆ ಮೆಚ್ಯೂರಿಟಿ ಅವಧಿ ವೇಳೆಗೆ ದೊಡ್ಡ ರಿಟರ್ನ್ಸ್ ಕೊಡಮಾಡುತ್ತದೆ. ಕೇವಲ 100 ರೂಗಳೊಂದಿಗೆ ಸಣ್ಣ ಉಳಿತಾಯ ಖಾತೆ ತೆರೆಯಬಹುದಾಗಿದೆ.
ಅಂಚೆ ಕಚೇರಿ ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್) ಹೆಸರಿನ ಇಂಥ ಮತ್ತೊಂದು ಯೋಜನೆಯಲ್ಲಿ ಹೂಡಿಕೆದಾರರು 15 ವರ್ಷಗಳ ಕಾಲ ಹೂಡಿಕೆ ಮಾಡುವ ಮೂಲಕ ಸುದೀರ್ಘಾವಧಿಯಲ್ಲಿ ಸುಲಭವಾಗಿ ದೊಡ್ಡ ಮೊತ್ತ ಕ್ರೋಢೀಕರಿಸಿಕೊಳ್ಳಬಹುದು.
ರಸ್ತೆಯಲ್ಲಿ ದುಡ್ಡಿನ ಸುರಿಮಳೆ….! ಬಾಚಿಕೊಳ್ಳಲು ಮುಗಿಬಿದ್ದ ಜನ
ಸದ್ಯದ ಮಟ್ಟಿಗೆ ಅಂಛೆ ಕಚೇರಿಯ ಪಿಪಿಎಫ್ ಯೋಜನೆಯಲ್ಲಿ ಮಾಡುವ ಹೂಡಿಕೆಗೆ 7%ನಷ್ಟು ರಿಟರ್ನ್ಸ್ ಬರುತ್ತಿದೆ. ಈ ಯೋಜನೆಯಲ್ಲಿ ಗರಿಷ್ಠ 1.5 ಲಕ್ಷ ರೂಗಳು ಅಥವಾ ಮಾಸಿಕ 12,500ರೂಗಳ ಹೂಡಿಕೆ ಮಾಡುವ ಮೂಲಕ ಮೆಚ್ಯೂರಿಟಿ ಅವಧಿಗೆ ಲಕ್ಷಾಂತರ ರೂಗಳನ್ನು ಪಡೆಯಬಹುದಾಗಿದೆ.
ಒಂದು ವೇಳೆ ನೀವು ಮಾಸಿಕ 12,500ರೂಗಳನ್ನು ಪ್ರತಿ ತಿಂಗಳಿನಂತೆ 15 ವರ್ಷಗಳ ಅವಧಿಗೆ ಹೂಡಿಕೆ ಮಾಡುತ್ತಾ ಸಾಗಿದಲ್ಲಿ, ನಿಮ್ಮ ಉಳಿತಾಯವೇ 22.5 ಲಕ್ಷ ರೂಗಳಾಗಿ ಬೆಳೆದು, ಅದಕ್ಕೆ 7.1% ಬಡ್ಡಿದರದಲ್ಲಿ 18.18 ಲಕ್ಷ ರೂಗಳು ಹೆಚ್ಚುವರಿಯಾಗಿ ಸೇರಿಕೊಂಡು ಒಟ್ಟಾರೆ 39.68 ಲಕ್ಷ ರೂಗಳು ನಿಮ್ಮದಾಗಲಿದೆ.
ಕನಿಷ್ಠ 500 ರೂಗಳಿಂದ ಗರಿಷ್ಠ 1.5 ಲಕ್ಷ ರೂಗಳವರೆಗೆ ಅಂಚೆ ಕಚೇರಿಯ ಪಿಪಿಎಫ್‌ನಲ್ಲಿ ಹೂಡಿಕೆ ಮಾಡಬಹುದಾಗಿದೆ. ಯೋಜನೆಯಡಿ, ಆದಾಯ ತೆರಿಗೆ ಕಾಯಿದೆ 80ಸಿ ವಿಧಿ ಅನುಸಾರ ಪಿಪಿಎಫ್ ಹೂಡಿಕೆದಾರರಿಗೆ ತೆರಿಗೆ ಪ್ರಯೋಜನಗಳೂ ಲಭಿಸಲಿವೆ.
ಹೂಡಿಕೆದಾರರು ವರ್ಷಕ್ಕೆ ಒಮ್ಮೆ ಹಣ ಹಿಂಪಡೆಯಬಹುದು ಅಥವಾ ತಮ್ಮ ಪೂರ್ಣ ಉಳಿತಾಯವನ್ನು ಯಾವುದಾದರೂ ಅವಧಿಯಲ್ಲಿ ಹಿಂಪಡೆಯಬಹುದಾಗಿದೆ. ಮೆಚ್ಯೂರಿಟಿ ಅವಧಿ ಪೂರ್ಣಗೊಂಡ ವೇಳೆ ನಿಮ್ಮ ಖಾತೆ ಮುಚ್ಚುವಿಕೆ ಅರ್ಜಿ ಸಲ್ಲಿಸುವ ಮೂಲಕ ನಿಮ್ಮ ಹೂಡಿಕೆಯ ಹಣದೊಂದಿಗೆ ಬಡ್ಡಿಯನ್ನೂ ಸೇರಿಸಿ ಹಿಂಪಡೆಯಬಹುದಾಗಿದೆ.