
ದಾವಣಗೆರೆ: ಅಂಚೆ ಕಚೇರಿಗಳಲ್ಲಿ ಏಪ್ರಿಲ್ 1 ಸೋಮವಾರ ಮತ್ತು 2 ಮಂಗಳವಾರದಂದು ಬ್ಯಾಂಕಿಂಗ್ ಸೇವೆ ಲಭ್ಯವಿರುವುದಿಲ್ಲ.
ವರ್ಷಾಂತ್ಯದ ಲೆಕ್ಕಾಚಾರಗಳು ಮತ್ತು ಬಡ್ಡಿ ಲೆಕ್ಕಾಚಾರಗಳು ನಡೆಯಲಿರುವುದರಿಂದ ಏ.1 ಮತ್ತು 2 ರಂದು ಅಂಚೆ ವಿಭಾಗದ ಯಾವುದೇ ಅಂಚೆ ಕಚೇರಿಯಲ್ಲಿ ಉಳಿತಾಯ ಖಾತೆಗಳಿಗೆ ಸಂಬಂಧಿಸಿದಂತೆ ವ್ಯವಹಾರ, ಬ್ಯಾಂಕಿಂಗ್ ಸೇವೆ ಇರುವುದಿಲ್ಲ. ಇದನ್ನು ಹೊರತುಪಡಿಸಿ ಪತ್ರದ ಅಂಚೆ ಸೇವೆ, ಎಟಿಎಂ ಸೇವೆ ನಿರಂತರವಾಗಿರುತ್ತದೆ ಎಂದು ಹೇಳಲಾಗಿದೆ.