ದೊಡ್ಡ ನಿರೀಕ್ಷೆಯ ಯಾವುದೇ ಹೂಡಿಕೆಯು ಸಾಮಾನ್ಯವಾಗಿ ಕೆಲವು ಅಪಾಯ ಇದ್ದೇ ಇರುತ್ತದೆ. ಆದರೆ ಪೋಸ್ಟ್ ಆಫೀಸ್ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಕಡಿಮೆ ಅಪಾಯದೊಂದಿಗೆ ಉತ್ತಮ ಲಾಭವನ್ನು ತಂದುಕೊಡಲಿದೆ.
ಸ್ಟಾಕ್ ಮಾರುಕಟ್ಟೆಯ ಅಪಾಯವು ಉತ್ತಮವಾದಾಗ ಇತರ ಹೂಡಿಕೆಯ ಆಯ್ಕೆಗಳಿಗಿಂತ ಲಾಭವು ಹೆಚ್ಚಾಗಿರುತ್ತದೆ. ಆದರೆ ಪ್ರತಿಯೊಬ್ಬರೂ ರಿಸ್ಕ್ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿರುವುದಿಲ್ಲ.
ಪೋಸ್ಟ್ ಆಫೀಸ್ ಆರ್‌ಡಿ ಠೇವಣಿ ಖಾತೆಯು ಸರ್ಕಾರದ ಬೆಂಬಲಿತ ಯೋಜನೆಯಾಗಿದ್ದು, ಅದು ನಿಮಗೆ ಸಾಧಾರಣ ಮೊತ್ತದ ಹಣವನ್ನು ಠೇವಣಿ ಮಾಡಲು ಮತ್ತು ಹೆಚ್ಚಿನ ಬಡ್ಡಿ ದರ ಗಳಿಸಲು ಅನುವು ಮಾಡಿಕೊಡುತ್ತದೆ.
ಪೋಸ್ಟ್ ಆಫೀಸ್ ಆರ್‌ಡಿಯಲ್ಲಿ ಹೂಡಿಕೆ ಹೇಗೆ ಪ್ರಾರಂಭಿಸೋದು ?
ನೀವು 100 ರೂ.ಗಳಿಂದ ಹೂಡಿಕೆ ಪ್ರಾರಂಭಿಸಬಹುದು. ಯಾವುದೇ ಗರಿಷ್ಠ ಹೂಡಿಕೆ ಮಿತಿ ಇಲ್ಲ. ನೀವು ಬಯಸಿದಷ್ಟು ಹೂಡಿಕೆ ಮಾಡಲು ನೀವು ಸ್ವತಂತ್ರರು.
ಬೊಜ್ಜಿಗೆ ಜೋತಿಷ್ಯ ಶಾಸ್ತ್ರದಲ್ಲಿದೆ ʼಪರಿಹಾರʼ
ಈ ಯೋಜನೆಯ ಖಾತೆಯು ಐದು ವರ್ಷಗಳವರೆಗೆ ತೆರೆದಿರುತ್ತದೆ. ಪ್ರತಿ ತ್ರೈಮಾಸಿಕದಲ್ಲಿ ಠೇವಣಿ ಮಾಡಿದ ಹಣದ ಮೇಲೆ ಬಡ್ಡಿಯನ್ನು (ವಾರ್ಷಿಕ ದರದಲ್ಲಿ) ಲೆಕ್ಕ ಹಾಕಲಾಗುತ್ತದೆ ಮತ್ತು ತ್ರೈಮಾಸಿಕದ ಕೊನೆಯಲ್ಲಿ ಖಾತೆಗೆ (ಬಡ್ಡಿ ಸೇರಿದಂತೆ) ಜಮಾ ಮಾಡಲಾಗುತ್ತದೆ.
ಎಷ್ಟು ಬಡ್ಡಿ ಸಿಗುತ್ತದೆ..?
ಠೇವಣಿ ಯೋಜನೆಗಳಲ್ಲಿ ಶೇ.5.8 ಬಡ್ಡಿ ದರ ಲಭ್ಯವಿದೆ. ಪ್ರತಿ ತ್ರೈಮಾಸಿಕದಲ್ಲಿ, ಭಾರತ ಸರ್ಕಾರವು ತನ್ನ ಎಲ್ಲಾ ಸಣ್ಣ ಉಳಿತಾಯ ಕಾರ್ಯಕ್ರಮಗಳಿಗೆ ಬಡ್ಡಿದರಗಳನ್ನು ನಿಗದಿಪಡಿಸುತ್ತದೆ.
ನೀವು ಹತ್ತು ವರ್ಷಗಳ ಕಾಲ ಅಂಚೆ ಕಚೇರಿ ಆರ್‌ಡಿ ಯೋಜನೆಯಲ್ಲಿ ತಿಂಗಳಿಗೆ 10,000 ರೂ. ಹೂಡಿಕೆ ಮಾಡಿದರೆ, ನೀವು ಶೇ. 5.8 ದರದಲ್ಲಿ 16 ಲಕ್ಷ ರೂ.ಗಿಂತ ಹೆಚ್ಚು ಸಂಗ್ರಹಿಸಬಹುದು.
ನಿಯಮಿತವಾಗಿ ಖಾತೆಗೆ ಹಣವನ್ನು ಠೇವಣಿ ಮಾಡುವುದನ್ನು ಮುಂದುವರಿಸಬೇಕು, ಮಾಡದಿದ್ದರೆ, ಒಂದು ಶೇಕಡಾ ಮಾಸಿಕ ದಂಡವನ್ನು ವಿಧಿಸಲಾಗುತ್ತದೆ. ನಾಲ್ಕು ಕಂತುಗಳು ಸತತವಾಗಿ ಕಟ್ಟದಿದ್ದರೆ ನಂತರ, ನಿಮ್ಮ ಖಾತೆಯನ್ನು ಮುಚ್ಚಲಾಗುತ್ತದೆ.