ಭಾರತೀಯ ಅಂಚೆ ಕೊಡಮಾಡುವ ಆಕರ್ಷಕ ಸ್ಕೀಂಗಳಲ್ಲಿ ಒಂದು ಮಾಸಿಕ ಪಿಂಚಣಿ ಯೋಜನೆ (ಎಂಐಎಸ್). ನಿವೃತ್ತಿಯ ಬಳಿಕ ತಿಂಗಳಿಗೆ ಇಂತಿಷ್ಟು ಎಂದು ಪಿಂಚಣಿ ಪಡೆಯಲು ಉಳಿತಾಯ ಮಾಡಲು ಅನುವಾಗುವ ಈ ಸ್ಕೀಂನಲ್ಲಿ ನೀವು ಪ್ರತಿ ತಿಂಗಳು ಹೂಡಿಕೆ ಮಾಡಬೇಕೆಂದೇನಿಲ್ಲ.
ಒಮ್ಮೆ ದೊಡ್ಡ ಮೊತ್ತವನ್ನು ಹೂಡಿಕೆ ಮಾಡಿ, ಅದು ಮೆಚ್ಯೂರ್ ಆದ ಬಳಿಕ ನಿಮ್ಮ ನಿವೃತ್ತ ಬದುಕಿಗೆ ಪಿಂಚಣಿಯನ್ನು ತಿಂಗಳು ತಿಂಗಳು ಪಡೆಯಬಹುದಾಗಿದೆ.
ಸದ್ಯ ಈ ಯೋಜನೆಯಲ್ಲಿ 6.6% ವಾರ್ಷಿಕ ಬಡ್ಡಿ ದೊರಕುತ್ತಿದ್ದು, ಗರಿಷ್ಠ ಲಾಭಗಳನ್ನು ಪಡೆಯಲು ನೀವು ಜಂಟಿ ಖಾತೆಯನ್ನು ತೆರೆಯಬಹುದಾಗಿದೆ. ಮಾಸಿಕ ಆದಾಯದ ಸ್ಕೀಂನಲ್ಲಿ ಮೂವರು ಮಂದಿ ಜಂಟಿ ಖಾತೆ ತೆರೆಯಬಹುದಾಗಿದೆ.
SHOCKING: ವಿಮಾನ ನಿಲ್ದಾಣದ ಬ್ಯಾಗೇಜ್ ಬೆಲ್ಟ್ ನಲ್ಲಿ ಹಸಿ ಮಾಂಸದ ತುಂಡು…!
ಕನಿಷ್ಠ 1000 ರೂ.ಗಳಿಂದ ಹಿಡಿದು ಗರಿಷ್ಠ 4.5 ಲಕ್ಷ ರೂ.ಗಳವರೆಗೂ ನೀವು ಈ ಸ್ಕೀಂನಲ್ಲಿ ಹೂಡಿಕೆ ಮಾಡಲು ಖಾತೆ ತೆರೆಯಬಹುದಾಗಿದೆ. ಜಂಟಿ ಖಾತೆಯಾದರೆ 9 ಲಕ್ಷ ರೂ.ಗಳನ್ನೂ ಖಾತೆಯಲ್ಲಿ ಇಡಬಹುದಾಗಿದೆ.
ಕೇವಲ 50,000 ರೂ.ಗಳನ್ನು ಹೂಡಿಕೆ ಮಾಡಿದಲ್ಲಿ ನಿಮಗೆ ವಾರ್ಷಿಕ 3,300 ರೂ.ಗಳ ಪಿಂಚಣಿ ಸಿಗಲಿದೆ. ಈ ಮೊತ್ತದ ಮೇಲಿನ ಬಡ್ಡಿಯನ್ನು ಖಾತೆ ತೆರೆದ ತಿಂಗಳ ನಂತರದಿಂದ ಹಿಡಿದ ಮೆಚ್ಯೂರಿಟಿವರೆಗೂ ಸೇರಿಸುತ್ತಾ ಹೋಗಲಾಗುವುದು.
ಸ್ಕೀಂನ ಇತರೆ ಅಂಶಗಳು:
1. ಠೇವಣಿ ಇಟ್ಟ ಕನಿಷ್ಠ ಒಂದು ವರ್ಷದವರೆಗೂ ನೀವು ಹಣ ಹಿಂಪಡೆಯುವಂತಿಲ್ಲ.
2. ಒಂದು ವರ್ಷದ ಬಳಿಕ ಹಾಗೂ 3 ವರ್ಷಗಳ ಒಳಗೆ ಖಾತೆ ಮುಚ್ಚಲ್ಪಟ್ಟರೆ, ಅಸಲಿನ 2%ನಷ್ಟು ದುಡ್ಡನ್ನು ಕಡಿತ ಮಾಡಿಕೊಂಡು ಮಿಕ್ಕ ದುಡ್ಡು ನೀಡಲಾಗುವುದು.
3. ಖಾತೆ ತೆರೆದ 3-5 ವರ್ಷದ ಅವಧಿಯಲ್ಲಿ ಮುಚ್ಚಲ್ಪಟ್ಟರೆ, ಅಸಲಿನ 1% ದುಡ್ಡು ಹಿಡಿದುಕೊಂಡು ಬಾಕಿ ಮೊತ್ತ ನಿಮಗೆ ನೀಡಲಾಗುವುದು.
4. ಒಂದು ವೇಳೆ ಖಾತೆದಾರರು ಅಕಾಲಿಕ ಮರಣಕ್ಕೀಡಾದರೆ, ಮಿಕ್ಕ ದುಡ್ಡನ್ನು ನಾಮಿನಿ/ಅಧಿಕೃತ ವಾರಸುದಾರರಿಗೆ ಹಿಂದಿರುಗಿಸಲಾಗುವುದು.
5. ರೀಫಂಡ್ ಮಾಡುವ ಹಿಂದಿನ ತಿಂಗಳವರೆಗೂ ಬಡ್ಡಿ ಕಟ್ಟಲಾಗುವುದು.