ಭದ್ರತೆ ಹಾಗೂ ದೊಡ್ಡ ರಿಟರ್ನ್ಸ್ ಬಯಸುವ ಮಂದಿಗೆ ಅಂಚೆ ಕಚೇರಿಗಳಲ್ಲಿ ಹೂಡಿಕೆ ಮಾಡುವುದು ಭಾರೀ ಜನಪ್ರಿಯವಾದ ಆಯ್ಕೆಯಾಗಿದೆ.
ಮಾಸಿಕ ಆದಾಯ ಯೋಜನೆ (ಎಂಐಎಸ್) ಯೋಜನೆಯೊಂದರ ಮೂಲಕ ದೊಡ್ಡ ಮೊತ್ತವೊಂದರ ಹೂಡಿಕೆಯ ಮೇಲೆ ಮಾಸಿಕ ಪಿಂಚಣಿ ಕೊಡುವ ಪ್ಲಾನ್ ಒಂದನ್ನು ಅಂಚೆ ಇಲಾಖೆ ಪರಿಚಯಿಸಿದೆ. ಈ ಯೋಜನೆಯ ಮೇಲೆ ಮೆಚ್ಯೂರಿಟಿ ಲಾಭಗಳೂ ಸಹ ಹೂಡಿಕೆದಾರರಿಗೆ ಸಿಗಲಿದೆ. 1000ರೂ ನಿಂದ 4.5 ಲಕ್ಷ ರೂವರೆಗೂ ವಿವಿಧ ಮೊತ್ತಗಳಲ್ಲಿ ಈ ಸ್ಕೀಂನಲ್ಲಿ ಹೂಡಿಕೆ ಮಾಡಬಹುದಾಗಿದೆ.
ಮನೆಗೆ ಹಾಕುವ ಬೀಗ ಬದಲಿಸುತ್ತೆ ನಿಮ್ಮ ʼಅದೃಷ್ಟʼ
ಗರಿಷ್ಠ ಮೂರು ಹೂಡಿಕೆದಾರರು ಜಂಟಿ ಖಾತೆಯನ್ನು ಯೋಜನೆಯಡಿ ತೆರೆಯಬಹುದಾಗಿದ್ದು, ಈ ಮೂಲಕ 9 ಲಕ್ಷ ರೂಪಾಯಿಗಳವರೆಗೂ ಉಳಿತಾಯ ಮಾಡಬಹುದಾಗಿದೆ.
ಸ್ಕೀಂನಲ್ಲಿ ಹೂಡಿಕೆ ಮೇಲೆ 6.6 ಪ್ರತಿಶತದಷ್ಟು ಸರಳ ಬಡ್ಡಿಯನ್ನು ಅಂಚೆ ಇಲಾಖೆ ಕೊಡುತ್ತಿದೆ.
ಈ ಮೂಲಕ ಒಮ್ಮೆ 50,000 ರೂ. ಹೂಡಿಕೆ ಮಾಡಿದರೆ, ವಾರ್ಷಿಕ 3,300 ರೂ. ಪಿಂಚಣಿಯಂತೆ ಐದು ವರ್ಷಗಳ ಅವಧಿಗೆ 16,500 ರೂ.ಗಳನ್ನು ಹೆಚ್ಚುವರಿಯಾಗಿ ಪಡೆಯಬಹುದಾಗಿದೆ.
ಇಲ್ಲಿದೆ ಜಗತ್ತಿನಲ್ಲೇ ಅತ್ಯಂತ ಹಿರಿದಾದ ಮೊಸಳೆ….!
ಹೀಗೆಯೇ; ಒಂದು ಲಕ್ಷ ರೂಪಾಯಿಗಳ ಹೂಡಿಕೆ ಮೇಲೆ ವಾರ್ಷಿಕ 6,600 ರೂ. ಹಾಗೂ ಐದು ವರ್ಷಗಳಲ್ಲಿ 33,000 ರೂಪಾಯಿಗಳನ್ನು ಪಡೆದುಕೊಳ್ಳಬಹುದಾಗಿದೆ. 4.5 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದಲ್ಲಿ ಮಾಸಿಕ 2,475 ರೂ.ನಂತೆ, ವಾರ್ಷಿಕ 29,700 ರೂಪಾಯಿ & ಐದು ವರ್ಷಗಳಲ್ಲಿ 1,48,500 ರೂ.ಗಳನ್ನು ಬಡ್ಡಿಯ ರೂಪದಲ್ಲಿ ಪಡೆಯಬಹುದಾಗಿದೆ.