alex Certify ಪ್ರತಿ ದಿನ 50 ರೂ. ಉಳಿಸಿದ್ರೆ ಸಿಗಲಿದೆ 35 ಲಕ್ಷ ರೂ. | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿ ದಿನ 50 ರೂ. ಉಳಿಸಿದ್ರೆ ಸಿಗಲಿದೆ 35 ಲಕ್ಷ ರೂ.

ಯಾವುದೇ ಯೋಜನೆಯಲ್ಲಿ ಹೂಡಿಕೆ ಮಾಡುವ ಮೊದಲು ನೂರಾರು ಬಾರಿ ಆಲೋಚನೆ ಮಾಡ್ತೇವೆ. ಹೆಚ್ಚಿನ ಲಾಭ ಸಿಗುವ ಹಾಗೂ ಸುರಕ್ಷಿತ ಯೋಜನೆಯಲ್ಲಿ ಹೂಡಿಕೆ ಮಾಡಬೇಕಾಗುತ್ತದೆ. ಅನೇಕರು ಬ್ಯಾಂಕ್ ಸೇರಿದಂತೆ ಬೇರೆ ಸಂಸ್ಥೆಗಳಲ್ಲಿ ಹೂಡಿಕೆ ಮಾಡ್ತಾರೆ. ಅಂಚೆ ಕಚೇರಿಯಲ್ಲಿರುವ ಅನೇಕ ಉತ್ತಮ ಹೂಡಿಕೆ ಯೋಜನೆ ಬಗ್ಗೆ ತಿಳಿದಿರುವುದಿಲ್ಲ. ಅಂಚೆ ಕಚೇರಿಯಲ್ಲೂ ಸಾಕಷ್ಟು ಅತ್ಯುತ್ತಮ ಹೂಡಿಕೆ ಯೋಜನೆಗಳಿವೆ.

ಬಂಗಾರ-ಬೆಳ್ಳಿಯೊಂದೇ ಅಲ್ಲ ಧನತೇರಸ್ ದಿನ ಖರೀದಿಸಿ ಈ ವಸ್ತು

ಅಂಚೆ ಕಚೇರಿಯ, ಗ್ರಾಮ ಸುರಕ್ಷಾ ಯೋಜನೆ ಉತ್ತಮ ಆಯ್ಕೆಯಾಗಿದೆ. ಇದ್ರಲ್ಲಿ ಉತ್ತಮ ಆದಾಯ ಗಳಿಸಬಹುದು. ಗ್ರಾಮ ಸುರಕ್ಷಾ ಯೋಜನೆಯಡಿಯಲ್ಲಿ, ಬೋನಸ್‌ನೊಂದಿಗೆ ವಿಮಾ ಮೊತ್ತ ಸಿಗಲಿದೆ. ವ್ಯಕ್ತಿ ಸಾವನ್ನಪ್ಪಿದ್ರೆ ಕಾನೂನುಬದ್ಧ ಉತ್ತರಾಧಿಕಾರಿಗೆ ಸಿಗುತ್ತದೆ.

19 ರಿಂದ 55 ವರ್ಷ ವಯಸ್ಸಿನ ಯಾವುದೇ ಭಾರತೀಯ ನಾಗರಿಕ, ಗ್ರಾಮ ಸುರಕ್ಷಾ ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಕನಿಷ್ಟ 10,000 ದಿಂದ 10 ಲಕ್ಷದವರೆಗೆ ಹೂಡಿಕೆ ಮಾಡಬಹುದು. ಪ್ರೀಮಿಯಂ ಪಾವತಿಯನ್ನು ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಅಥವಾ ವಾರ್ಷಿಕವಾಗಿ ನೀವು ಆಯ್ಕೆ ಮಾಡಬಹುದು.

ಪ್ರೀಮಿಯಂ ಪಾವತಿಸಲು ಗ್ರಾಹಕರಿಗೆ 30 ದಿನಗಳ ಕಾಲಾವಕಾಶ ನೀಡಲಾಗಿದೆ.

ʼಬಾಲಿವುಡ್ʼನ 20 ವರ್ಷಗಳ ಪ್ರಯಾಣ ಸಂಭ್ರಮಿಸಿದ ನಟಿ ದಿಯಾ ಮಿರ್ಜಾ

ಗ್ರಾಮ ಸುರಕ್ಷಾ ಬಿಮಾ ಯೋಜನೆಯಲ್ಲಿ ಸಾಲ ಸಿಗುತ್ತದೆ. ಪಾಲಿಸಿಯನ್ನು ಖರೀದಿಸಿದ ನಾಲ್ಕು ವರ್ಷಗಳ ನಂತರ ಸಾಲ ಪಡೆಯಬಹುದು.

19 ವರ್ಷ ವಯಸ್ಸಿನಲ್ಲಿ 10 ಲಕ್ಷ  ರೂಪಾಯಿಗೆ ಗ್ರಾಮ ಸುರಕ್ಷಾ ಬಿಮಾ ಯೋಜನೆಯನ್ನು ಖರೀದಿಸಿದರೆ, 55 ವರ್ಷಗಳ ಮಾಸಿಕ ಪ್ರೀಮಿಯಂ 1,515 ರೂಪಾಯಿಯಾಗಲಿದೆ. ಪಾಲಿಸಿ ಖರೀದಿದಾರರು 55 ವರ್ಷಗಳವರೆಗೆ 31.60 ಲಕ್ಷ ರೂಪಾಯಿ ಪಾವತಿ ಮಾಡಬೇಕಾಗುತ್ತದೆ. 58 ವರ್ಷದಲ್ಲಿ ಅದು 33.40 ಲಕ್ಷ ರೂಪಾಯಿಯಾಗಿರುತ್ತದೆ. 60 ವರ್ಷದಲ್ಲಿ ಎಲ್ಲ ಸೇರಿ 34.60 ಲಕ್ಷ ರೂಪಾಯಿಯಾಗಲಿದೆ.

ಟೋಲ್-ಫ್ರೀ ಸಹಾಯವಾಣಿ 1800 180 5232/155232 ಅಥವಾ ಅಧಿಕೃತ ವೆಬ್‌ಸೈಟ್ www.postallifeinsurance.gov.in ಗೆ ಭೇಟಿ ನೀಡುವ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...