ಸ್ಥಿರ ಠೇವಣಿಗಳಿಗಿಂತ ಉತ್ತಮ ರಿಟರ್ನ್ಸ್ ಕೊಡುವುದಲ್ಲದೇ ನಿಮ್ಮ ದುಡ್ಡಿಗೆ ಸುರಕ್ಷತೆ ನೀಡುವಲ್ಲಿ ಭಾರತೀಯ ಅಂಚೆ ಕಚೇರಿಗಳು ಸದಾ ನಂಬಿಕಾರ್ಹ ಸಂಸ್ಥೆಯಾಗಿದೆ.
ಅಂಚೆ ಕಚೇರಿಯ ರೆಕರಿಂಗ್ ಠೇವಣಿಗಳು ಇದಕ್ಕೊಂದು ಉದಾಹರಣೆ. ಅಂಚೆ ಕಚೇರಿಯಲ್ಲಿ ಆರ್‌ಡಿ ಖಾತೆ ತೆರೆದು ಕನಿಷ್ಠ 100 ರೂಪಾಯಿಗಳಿಂದ ಹಿಡಿದು ಖಾತೆದಾರರು ತಮ್ಮ ಭವಿಷ್ಯಕ್ಕೆ ಉಳಿತಾಯ ಮಾಡಬಹುದಾಗಿದೆ. ಹೂಡಿಕೆಗಳ ಮೇಲೆ ಗರಿಷ್ಠ ಮಿತಿ ಇಲ್ಲದಿರುವ ಕಾರಣ ಹೂಡಿಕೆದಾರರು ಎಷ್ಟು ಬೇಕಾದರೂ ದುಡ್ಡನ್ನು ಆರ್‌ಡಿ ಖಾತೆಗಳಿಗೆ ಹಾಕಿಕೊಳ್ಳಬಹುದಾಗಿದೆ.
ಐದು ವರ್ಷಗಳ ಸ್ಥಿರ ಅವಧಿ ಬಳಿಕ ಖಾತೆ ಮೆಚ್ಯೂರ್ ಆದ ವೇಳೆ ಹೂಡಿಕೆದಾರರು ತಮ್ಮ ಖಾತೆಗಳಿಂದ ದುಡ್ಡು ಹಿಂಪಡೆಯಬೇಕು. ಸದ್ಯದ ಮಟ್ಟಿಗೆ ಅಂಚೆ ಕಚೇರಿಯ ಆರ್‌ಡಿಗಳ ಮೇಲೆ 5.8 ಪ್ರತಿಶತ ಬಡ್ಡಿದರ ಸಿಗುತ್ತಿದೆ.
‘ಸಂತೂರ್’ನಲ್ಲಿ ಜನ ಗಣ ಮನ ನುಡಿಸಿದ ಇರಾನಿ ಬಾಲಕಿ: ವಿಡಿಯೋ ವೈರಲ್….!
ಪ್ರತಿ ತ್ರೈಮಾಸಿಕಕ್ಕೆ ಬಡ್ಡಿ ಪಡೆಯುವ ಹೂಡಿಕೆದಾರರು, ಇದೇ ದರದಲ್ಲಿ ಪ್ರತಿ ತಿಂಗಳು 10,000 ರೂ.ಗಳ ಹೂಡಿಕೆ ಮಾಡಿದಲ್ಲಿ 10 ವರ್ಷಗಳಲ್ಲಿ ಈ ದುಡ್ಡು ಬಡ್ಡಿ ಸೇರಿ 16 ಲಕ್ಷ ರೂ.ಗಳಾಗಿ ಬೆಳೆಯಲಿದೆ.
ಆದರೆ ಇದಕ್ಕೆ ಹೂಡಿಕೆದಾರರು ಪ್ರತಿ ತಿಂಗಳು ಹೂಡಿಕೆ ಮಾಡುವುದನ್ನು ನಿಲ್ಲಿಸಬಾರದು. ಒಂದು ವೇಳೆ ಸೂಕ್ತ ಸಮಯದಲ್ಲಿ ನಿಗದಿತ ಮೊತ್ತವನ್ನು ಪಾವತಿ ಮಾಡಲು ಆಗದೇ ಇದ್ದಲ್ಲಿ ಅದಕ್ಕೆ ದಂಡ ತೆರಬೇಕಾಗುತ್ತದೆ. ಸತತ ನಾಲ್ಕು ತಿಂಗಳ ಮಟ್ಟಿಗೆ ಹೂಡಿಕೆದಾರರು ಹಣ ಪಾವತಿ ಮಾಡದೇ ಇದ್ದಲ್ಲಿ ಖಾತೆ ತನ್ನಿಂತಾನೇ ನಿಷ್ಕ್ರಿಯಗೊಳ್ಳುತ್ತದೆ.
ಹೀಗೆ ನಿಷ್ಕ್ರಿಯಗೊಂಡ ಖಾತೆಯನ್ನು ಹೂಡಿಕೆದಾರರು ಎರಡು ತಿಂಗಳ ಒಳಗೆ ನವೀಕರಿಸಬಹುದಾಗಿದೆ. ಇಲ್ಲವಾದಲ್ಲಿ ಆ ಖಾತೆ ಶಾಶ್ವತವಾಗಿ ಮುಚ್ಚಲ್ಪಡುತ್ತದೆ. ಹೂಡಿಕೆದಾರರು ತಮ್ಮ ಸಂಬಂಧಿಕರು ಅಥವಾ ಸ್ನೇಹಿತರನ್ನು ನಾಮಿನಿ ಮಾಡಬಹುದಾಗಿದೆ.