ಗಳಿಸಿದ ಹಣವನ್ನು ಸುರಕ್ಷಿತವಾಗಿಡಲು ಪ್ರತಿಯೊಬ್ಬರೂ ಬಯಸ್ತಾರೆ. ಸರಿಯಾದ ಸ್ಥಳದಲ್ಲಿ ಹೂಡಿಕೆ ಮಾಡಿ, ಹಣ ಡಬಲ್ ಮಾಡುವ ಆಸೆ ಪ್ರತಿಯೊಬ್ಬರಿಗೂ ಇರುತ್ತದೆ. ಅಂಚೆ ಕಚೇರಿಯ ಯೋಜನೆ, ಹೂಡಿಕೆದಾರರಿಗೆ ಉತ್ತಮ ಆಯ್ಕೆಯಾಗಿದೆ. ಅಂಚೆ ಕಚೇರಿ ಯೋಜನೆಯಲ್ಲಿ 1000 ರೂಪಾಯಿ ಹೂಡಿಕೆ ಮಾಡಿದರೆ 1389.49 ರೂಪಾಯಿ ಗಳಿಸಬಹುದು. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದಲ್ಲಿ ಹೂಡಿಕೆ ಮಾಡಿ, ಗಳಿಸಬಹುದು.
ಎನ್.ಎಸ್.ಸಿ. ಸಣ್ಣ ಉಳಿತಾಯ ಯೋಜನೆಯಾಗಿದೆ. ಎನ್.ಎಸ್.ಸಿ.ಯಲ್ಲಿ ಶೇಕಡಾ 6.8 ಬಡ್ಡಿ ಸಿಗ್ತದೆ. ಸಣ್ಣ ಪ್ರಮಾಣದಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ. ಇದು ಐದು ವರ್ಷಗಳ ಯೋಜನೆಯಾಗಿದೆ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳಲ್ಲಿನ ಹೂಡಿಕೆಯ ಮೇಲೆ ಆದಾಯ ತೆರಿಗೆ ವಿನಾಯಿತಿ ಸಿಗುತ್ತದೆ.
ಕನಿಷ್ಠ 1000 ರೂಪಾಯಿಗಳೊಂದಿಗೆ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳಲ್ಲಿ ಹೂಡಿಕೆ ಪ್ರಾರಂಭಿಸಬಹುದು. ಹೂಡಿಕೆಗೆ ಗರಿಷ್ಠ ಮಿತಿ ಇಲ್ಲ. ಈ ಯೋಜನೆ ಆದಾಯ ತೆರಿಗೆಯ ಸೆಕ್ಷನ್ 80ಸಿ ಅಡಿಯಲ್ಲಿ ಬರುತ್ತದೆ. ಹೂಡಿಕೆದಾರ ಪ್ರತಿ ವರ್ಷ 1.5 ಲಕ್ಷದವರೆಗೆ ತೆರಿಗೆ ವಿನಾಯಿತಿ ಪಡೆಯಬಹುದು.
ಐದು ವರ್ಷದ ನಂತ್ರ ಈ ಮೊತ್ತವನ್ನು ಮತ್ತೆ ಹೂಡಿಕೆ ಮಾಡಲು ಸಾಧ್ಯವಿಲ್ಲ. ಎಲ್ಲ ಬಡ್ಡಿ ಸೇರಿಸಿ ಮೂಲ ಮೊತ್ತದ ಜೊತೆ ನಿಮಗೆ ನೀಡಲಾಗುತ್ತದೆ. ಎನ್.ಎಸ್.ಸಿ. ಮೇಲೆ ನೀವು ಸಾಲ ತೆಗೆದುಕೊಳ್ಳಬಹುದಾಗಿದೆ.