ಹಣ ಗಳಿಕೆ ಹಾಗೂ ಹಣ ಹೂಡಿಕೆಗೆ ಅಂಚೆ ಕಚೇರಿ ಅತ್ಯುತ್ತಮ ಆಯ್ಕೆ. ಅಂಚೆ ಕಚೇರಿ ವಿಶೇಷ ಯೋಜನೆ ಮೂಲಕ ಪತಿ-ಪತ್ನಿ ವಾರ್ಷಿಕವಾಗಿ 59,400 ರೂಪಾಯಿ ಗಳಿಸಬಹುದು. ಈ ಯೋಜನೆಯ ಹೆಸರು ಅಂಚೆ ಕಚೇರಿ ತಿಂಗಳು ಉಳಿತಾಯ ಯೋಜನೆ. ಇದ್ರಡಿ ಪ್ರತಿ ತಿಂಗಳು ಸ್ಥಿರ ಆದಾಯ ಗಳಿಸಬಹುದು. ಮಾಸಿಕ ಪ್ರತಿ ತಿಂಗಳು 4950 ರೂಪಾಯಿ ಗಳಿಸಬಹುದು.
ಅಂಚೆ ಕಚೇರಿ ತಿಂಗಳ ಉಳಿತಾಯ ಯೋಜನೆಯನ್ನು ಒಂಟಿಯಾಗಿ, ಜಂಟಿಯಾಗಿ ತೆರೆಯಬಹುದು. ಮೂವರು ಸೇರಿಯೂ ಈ ಯೋಜನೆಯಿಂದ ಹಣ ಗಳಿಸಬಹುದು. ಜಂಟಿ ಯೋಜನೆಯಲ್ಲಿ ಹಣ ದ್ವಿಗುಣಗೊಳ್ಳುತ್ತದೆ. ವೈಯಕ್ತಿಕ ಖಾತೆ ತೆರೆಯುವಾಗ ಕನಿಷ್ಠ 1,000 ರೂಪಾಯಿ ಮತ್ತು ಗರಿಷ್ಠ 4.5 ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು. ಜಂಟಿ ಖಾತೆಯಲ್ಲಿ ಗರಿಷ್ಠ 9 ಲಕ್ಷ ರೂಪಾಯಿ ಜಮಾ ಮಾಡಬಹುದು. ನಿವೃತ್ತ ನೌಕರರು ಮತ್ತು ಹಿರಿಯ ನಾಗರಿಕರಿಗೆ ಈ ಯೋಜನೆ ತುಂಬಾ ಪ್ರಯೋಜನಕಾರಿಯಾಗಿದೆ. ಪ್ರಸ್ತುತ ಶೇಕಡಾ 6.6 ರಷ್ಟು ದರದಲ್ಲಿ ವಾರ್ಷಿಕ ಬಡ್ಡಿ ಸಿಗುತ್ತದೆ. ವಾರ್ಷಿಕವಾಗಿ ಅಥವಾ ತಿಂಗಳ ಲೆಕ್ಕದಲ್ಲಿ ಹಣ ಪಡೆಯಬಹುದು.
ಉದಾಹರಣೆಗೆ ಈ ಯೋಜನೆಯಡಿ ಪತಿ-ಪತ್ನಿ ಜಂಟಿ ಖಾತೆಗೆ 9 ಲಕ್ಷ ರೂಪಾಯಿ ಜಮಾ ಮಾಡಿದ್ರೆ, ಶೇಕಡಾ 6.6 ರಷ್ಟು ಬಡ್ಡಿ ಸಿಗುತ್ತದೆ. ಅವರಿಗೆ ವಾರ್ಷಿಕ ಆದಾಯ 59,400 ರೂಪಾಯಿ ಸಿಗುತ್ತದೆ. ಇದನ್ನು 12 ಭಾಗಗಳಾಗಿ ವಿಂಗಡಿಸಿದರೆ, ಮಾಸಿಕ 4950 ರೂಪಾಯಿ ಸಿಗುತ್ತದೆ.