ಬೆಂಗಳೂರು: ವಾಹನ ಸವಾರರಿಗೆ ಸಾರಿಗೆ ಇಲಾಖೆಯಿಂದ ಸಿಹಿ ಸುದ್ದಿ ನೀಡಲಾಗಿದೆ. ಮನೆ ಬಾಗಿಲಿಗೆ ಆರ್.ಸಿ., ಡಿಎಲ್ ತಲುಪಿಸಲಾಗುವುದು
ಇನ್ನು ಡಿಎಲ್, ಆರ್.ಸಿ. ಕಾರ್ಡ್ ಗಾಗಿ ಆರ್.ಟಿ.ಒ. ಕಚೇರಿಗೆ ಅಲೆದಾಡಬೇಕಿಲ್ಲ. ಇವುಗಳನ್ನು ಮನೆಗೆ ತಲುಪಿಸಲು ಸಾರಿಗೆ ಇಲಾಖೆ ವ್ಯವಸ್ಥೆ ಮಾಡಿದೆ. ಪೋಸ್ಟಲ್ ಮೂಲಕವೇ ಮನೆಗಳಿಗೆ ರವಾನೆ ಮಾಡಲಾಗುವುದು.
ಎನ್ವಲಪ್ ಕವರ್ ನಲ್ಲಿ ಸೂಚನಾ ಫಲಕಗಳೊಂದಿಗೆ ಕೊರಿಯರ್ ವ್ಯವಸ್ಥೆ ಮಾಡಲಿದ್ದು, ಈ ಸಂಬಂಧ ಅಂಚೆ ಇಲಾಖೆ ಆರ್‌ಟಿಒ ಒಪ್ಪಂದ ಮಾಡಿಕೊಂಡಿದೆ. ಈ ಬಗ್ಗೆ ಸರ್ಕಾರದಿಂದಲೂ ಅನುಮೋದನೆ ನೀಡಲಾಗಿದೆ.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆದೇಶ ನೀಡಲಾಗಿದ್ದು, ಇನ್ನು ಮುಂದೆ ಸ್ಪೀಡ್ ಪೋಸ್ಟ್ ಮೂಲಕವೇ ಆರ್‌ಸಿ, ಡಿಎಲ್ ಮನೆ ಬಾಗಿಲಿಗೆ ಬರಲಿದೆ. ಅರ್ಜಿದಾರರು ಆನ್ಲೈನ್ ನಲ್ಲಿ ದಾಖಲೆಗಳ ಬಗ್ಗೆ ಟ್ರ್ಯಾಕ್ ಮಾಡಬಹುದು. ನೂತನ ವ್ಯವಸ್ಥೆ ಜಾರಿ ಬಗ್ಗೆ ರಾಜ್ಯ ಸಾರಿಗೆ ಇಲಾಖೆ ಯಿಂದ ಮಾಧ್ಯಮ ಪ್ರಕಟಣೆ ನೀಡಲಾಗಿದೆ.