ಗ್ರಾಹಕನಂತೆ ಪೋಸು ಕೊಟ್ಟ ಖದೀಮನೊಬ್ಬ ಗನ್ ತೋರಿಸಿ ಎಸ್‌ಯುವಿಯೊಂದಿಗೆ ಪರಾರಿಯಾದ ಪ್ರಸಂಗ ಲುಧಿಯಾನ ಬಳಿಯ ರಾಷ್ಟ್ರೀಯ ಹೆದ್ದಾರಿಯ ದೋರಹಾ ಬಳಿ ನಡೆದಿದೆ.
ಟೆಸ್ಟ್ ಡ್ರೈವ್‌ಗೆ ತೆಗೆದುಕೊಂಡ ಎಸ್‌ಯುವಿಯೊಂದಿಗೆ ಪರಾರಿಯಾಗಿದ್ದು, ಅದಕ್ಕೂ ಮುನ್ನ ಆಟೋಮೊಬೈಲ್ ಏಜೆನ್ಸಿಯ ಉದ್ಯೋಗಿಗೆ ಗನ್ ತೋರಿಸಿ ಬೆದರಿಕೆ ಹಾಕಿದ್ದಾನೆ.
ಧಂಧರಿ ಕಲಾನ್‌ನಲ್ಲಿರುವ ಆಟೋಮೊಬೈಲ್ ಏಜೆನ್ಸಿಗೆ ಬಂದ ವ್ಯಕ್ತಿ, ಹೊಚ್ಚ ಹೊಸ ಮಹೀಂದ್ರಾ ಎಸ್‌ಯುವಿ ಖರೀದಿಸಲು ಬಯಸಿದ ಮತ್ತು ಟೆಸ್ಟ್ ರೈಡ್ ಮಾಡಲು ಇಚ್ಚಿಸಿದ.
BIG NEWS: ನ್ಯಾಯಕ್ಕಾಗಿ ಹೋರಾಡಿದ ಬ್ಯಾಂಕ್ ಠೇವಣಿದಾರರ ವಿರುದ್ಧವೇ FIR ದಾಖಲು
ಏಜೆನ್ಸಿಯ ಮಾರಾಟ ವಿಭಾಗದ ಮುಖ್ಯಸ್ಥೆ ಸುನೀತಾ ರಾಣಿ ಅತನ ಡ್ರೈವಿಂಗ್ ಲೈಸೆನ್ಸ್ ಪಡೆದು ಡೆಮೊ ವಾಹನದಲ್ಲಿ ಪರೀಕ್ಷಾರ್ಥ ಸಂಚಾರಕ್ಕೆ ಕರೆದುಕೊಂಡು ಹೋಗಿದ್ದಾರೆ.
ರಾಜ್‌ಗಢ ಗ್ರಾಮವನ್ನು ತಲುಪಿದ ನಂತರ ಆತ ಎಸ್‌ಯುವಿಯ ಚಿತ್ರವನ್ನು ಕ್ಲಿಕ್ ಮಾಡಿ ಮತ್ತು ತನಗೆ ಕಳುಹಿಸುವಂತೆ ವಿನಂತಿಸಿದ.
ಆಕೆಯು ತನ್ನ ಮೊಬೈಲ್ ಫೋನ್ ಅನ್ನು ಹೊರತೆಗೆಯುತ್ತಿದ್ದಂತೆ, ಅದನ್ನು ಕಸಿದುಕೊಂಡು ಬಂದೂಕನ್ನು ತೋರಿಸಿ, ಸುಮ್ಮನಿರುವಂತೆ ಅವಳನ್ನು ಬೆದರಿಸಿದ್ದಾನೆ.
ಆರೋಪಿಯು ಬಂದೂಕು ತೋರಿಸಿ ಆತನ ಡ್ರೈವಿಂಗ್ ಲೈಸೆನ್ಸ್ ಅನ್ನೂ ಕಸಿದುಕೊಂಡು ಆಕೆಯನ್ನು ವಾಹನದಿಂದ ಇಳಿಸಿ ವಾಹನ ಚಲಾಯಿಸಿಕೊಂಡು ಹೋಗಿದ್ದಾನೆ.
ಶೋರೂಮ್‌ನಲ್ಲಿ ಅಳವಡಿಸಲಾದ ಸಿಸಿ ಟಿವಿಗಳಲ್ಲಿ ಆರೋಪಿಯ ಚಹರೆ ಪತ್ತೆಯಾಗಿದೆ. ಅವನ ಮುಖವನ್ನು ಮಾಸ್ಕ್‌ನಿಂದ ಮುಚ್ಚಿಕೊಂಡಿದ್ದ.
ಸುನೀತಾ ರಾಣಿ ಪ್ರಕಾರ, ಆರೋಪಿ ತನ್ನನ್ನು ಅಮನ್ ಎಂದು ಪರಿಚಯಿಸಿಕೊಂಡಿದ್ದ, ಅವನ ಡ್ರೈವಿಂಗ್ ಲೈಸೆನ್ಸ್‌ನಲ್ಲಿ ಕೂಡ ಅದೇ ಹೆಸರು ನಮೂದಾಗಿತ್ತು. ಈ ವಾಹನ ಕಳ್ಳನ ವಿರುದ್ಧ ಐಪಿಸಿ ಸೆಕ್ಷನ್ 379-ಬಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.