ದಕ್ಷಿಣ ಫೋರ್ಚುಗಲ್ ನಲ್ಲಿ ಏರ್ ಶೋ ನಡೆಯುತ್ತಿದ್ದ ವೇಳೆ ಎರಡು ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡು ನೆಲಕ್ಕಪ್ಪಳಿಸಿದ ಪರಿಣಾಮ ಓರ್ವ ಪೈಲಟ್ ಸಾವನ್ನಪ್ಪಿ ಮತ್ತೊರ್ವ ತೀವ್ರವಾಗಿ ಗಾಯಗೊಂಡಿದ್ದಾನೆ.
ಬೆಜಾ ಏರ್ ಶೋ ಸಂದರ್ಭದಲ್ಲಿ ಆರು ವಿಮಾನಗಳು ಹಾರಾಟ ನಡೆಸುತ್ತಿದ್ದು, ಈ ವೇಳೆ ನಿಯಂತ್ರಣ ಕಳೆದುಕೊಂಡ ಒಂದು ವಿಮಾನ ಅಡ್ಡಾದಿಡ್ಡಿ ಹಾರಲಾರಂಭಿಸಿದೆ. ನಂತರ ಹಾರಾಟದಲ್ಲಿದ್ದ ಮತ್ತೊಂದು ವಿಮಾನಕ್ಕೆ ನೇರವಾಗಿ ಡಿಕ್ಕಿ ಹೊಡೆದಿದ್ದು, ಇದರ ಪರಿಣಾಮ ಎರಡು ವಿಮಾನಗಳು ನೆಲಕ್ಕೆ ಉರುಳಿವೆ.
ಈ ಅಪಘಾತದಿಂದಾಗಿ ಒಂದು ವಿಮಾನದ ಪೈಲೆಟ್ ಸಾವನ್ನಪ್ಪಿದ್ದು ಗಂಭೀರವಾಗಿ ಗಾಯಗೊಂಡಿರುವ ಮತ್ತೋರ್ವನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಘಟನೆ ನಡೆದ ಬಳಿಕ ಏರ್ ಶೋ ಅನ್ನು ಸ್ಥಗಿತಗೊಳಿಸಲಾಗಿದೆ.