ಇಂಧನ ಬೆಲೆಗಳು ದಾಖಲೆ ಬರೆದಿರುವ ಕಾರಣ ಪರ್ಯಾಯ ಇಂಧನವಾಗಿ ಎಲೆಕ್ಟ್ರಿಕ್ ಬೈಕ್ ಮತ್ತು ಕಾರುಗಳ ಬಳಕೆ ಹೆಚ್ಚುತ್ತಿದೆ. ಅದರಲ್ಲೂ ಕಾರುಗಳಿಗಾಗಿ ಬೇಡಿಕೆ ದಿನೇ ದಿನೆ ಭಾರತದಲ್ಲಿ ಏರಿಕೆ ಕಾಣುತ್ತಲೇ ಇದೆ.
ಟಾಟಾ, ಹುಂಡೈ ಕಂಪನಿಗಳು ತಮ್ಮ ಹೊಸ ಶ್ರೇಣಿಯ ಎಲೆಕ್ಟ್ರಿಕ್ ಕಾರುಗಳನ್ನು ಪರಿಚಯಿಸಿವೆ. ಹಾಗಿದ್ದೂ, ಐಷಾರಾಮಿ ಹಾಗೂ ಅತ್ಯಂತ ವೇಗದ ಸ್ಪೋರ್ಟ್ಸ್ ಶ್ರೇಣಿಯ ಎಲೆಕ್ಟ್ರಿಕ್ ಕಾರುಗಳಿಗೆ ಭಾರತದಲ್ಲಿನ ಅತೀವ ಬೇಡಿಕೆಯನ್ನು ಗಮನಿಸಿದ ಜರ್ಮನಿಯ ಖ್ಯಾತ ಕಾರು ತಯಾರಕ ಸಂಸ್ಥೆ ಪೊರ್ಶೆ, ತನ್ನ ಟೇಯ್ಕನ್ ಮಾಡೆಲ್ ಮಾರುಕಟ್ಟೆಗೆ ತಂದಿದೆ.
ಸಂಪೂರ್ಣ ಎಲೆಕ್ಟ್ರಿಕ್ ಸ್ಪೋಟ್ಸ್ ಕಾರಾಗಿರುವ ಟೇಯ್ಕನ್ ವೇಗವು ಕೇವಲ ನಾಲ್ಕು ಸೆಕೆಂಡ್ಗಳಲ್ಲಿ 100 ಕಿ.ಮೀ.ಆಗಿದೆ. ಅಂದರೆ, ಗಂಟೆಗೆ 100 ಕಿ.ಮೀ. ದೂರ ಚಲಿಸುವಷ್ಟು ವೇಗವನ್ನು ಕಾರಿನ ಎಂಜಿನ್ ಹೊಂದಿದೆ. ಒಂದು ಬಾರಿ ಪೂರ್ತಿ ಬ್ಯಾಟರಿ ಚಾರ್ಜ್ ಮಾಡಿದರೆ ಬರೋಬ್ಬರಿ 484 ಕಿ.ಮೀ. ವರೆಗೆ ಚಿಂತೆ ಇಲ್ಲದೆಯೇ ಚಲಿಸುವ ಕಾರು ಇದಾಗಿದೆ. ಇದಕ್ಕಾಗಿ ಕಂಪನಿಯಿಂದಲೇ ಗೋಡೆಗೆ ಅಳವಡಿಕೆ ಮಾಡಲಾಗುವ 11 ಕಿ.ವ್ಯಾಟ್ ಚಾರ್ಜರ್ ಕೂಡ ನೀಡಲಾಗುವುದು. ಒಟ್ಟು 9 ಗಂಟೆಗಳು ಚಾರ್ಜ್ ಮಾಡಿದರೆ ಕಾರಿನ ಬ್ಯಾಟರಿ ಫುಲ್ ಆಗಲಿದೆ.
ಎಸಿಯನ್ನು ಗೋಡೆಯ ಮೇಲೆ ಏಕೆ ಹಾಕುತ್ತಾರೆ ಗೊತ್ತಾ……?
ಟೇಯ್ಕನ್ ಮತ್ತು ಟೇಯ್ಕನ್ ಕ್ರಾಸ್ ಟುರಿಸ್ಮೊ ಎಂಬ ಎರಡು ಶ್ರೇಣಿಗಳ ನಾಲ್ಕು ಮಾಡೆಲ್ಗಳು ಭಾರತದಲ್ಲಿ ಲಭ್ಯವಿದೆ. ಎಕ್ಸ್ ಶೋರೂಂ ಬೆಲೆಯು ಬರೋಬ್ಬರಿ 1.50 ಕೋಟಿ ರೂ. ಆಗಿದೆ.
ಟೇಯ್ಕನ್ಗೆ ಮಾರುಕಟ್ಟೆಯಲ್ಲಿ ಭಾರಿ ಪೈಪೋಟಿ ನೀಡಲು ಆಡಿ ಇ-ಟ್ರಾನ್, ಜಾಗ್ವಾರ್ ಐ-ಪೇಸ್ ಮತ್ತು ಮರ್ಸಿಡೀಸ್ ಇಕ್ಯುಸಿ ಸಜ್ಜಾಗಿವೆ.