ಪೋರ್ಷೆ 911 ಹೊಸ ವಿಶ್ವ ದಾಖಲೆ ಮಾಡಿದೆ. ಈ ಸ್ಪೋರ್ಟ್ಸ್ ಕಾರ್ ಸಮುದ್ರ ಮಟ್ಟದಿಂದ 6,734 ಮೀಟರ್‌ಗಳ ಗರಿಷ್ಠ ಎತ್ತರವನ್ನು ತಲುಪಿದೆ. ಇದುವರೆಗೆ ಯಾವುದೇ ಕಾರು ಇಷ್ಟು ಎತ್ತರದ ಪ್ರದೇಶವನ್ನು ತಲುಪಿದ ದಾಖಲೆಗಳಿಲ್ಲ.
ಡಿಸೆಂಬರ್ 2 ರಂದು ಚಿಲಿಯ ಓಜೋಸ್ ಡೆಲ್ ಸಲಾಡೋ ಜ್ವಾಲಾಮುಖಿಯ ಪಶ್ಚಿಮ ಪರ್ವತದ ಶಿಖರದಲ್ಲಿ ರೇಸಿಂಗ್ ಚಾಲಕ ರೊಮೈನ್ ಡುಮಾಸ್ ಈ ಮೂಲಕ ಹೊಸ ವಿಶ್ವ ದಾಖಲೆಯನ್ನು ಸ್ಥಾಪಿಸಿದರು.
ಈ ದಾಖಲೆಯ ಪ್ರಯತ್ನದಲ್ಲಿ ಚಿಲಿ, ಫ್ರಾನ್ಸ್, ಜರ್ಮನಿ, ಅಮೆರಿಕಾ, ಕೆನಡಾ ಮತ್ತು ಸ್ವಿಟ್ಜರ್ಲೆಂಡ್‌ನ ಸದಸ್ಯರನ್ನು ಒಳಗೊಂಡ ಅಂತರರಾಷ್ಟ್ರೀಯ ತಂಡವಿತ್ತು.
ಮೂರು-ಬಾರಿ ಲೆ ಮ್ಯಾನ್ಸ್ ಚಾಂಪಿಯನ್ ಡುಮಾಸ್ ಮತ್ತು ಅವರ ತಂಡವು ಈ ಸಾಧನೆಯನ್ನು ಸಾಧಿಸಲು ಅತ್ಯಂತ ಸವಾಲಿನ ಪರಿಸ್ಥಿತಿಗಳನ್ನು ಎದುರಿಸಬೇಕಾಗಿತ್ತು. ಅತ್ಯಂತ ಕಡಿಮೆ ಉಷ್ಣಾಂಶದ ಪ್ರದೇಶದಲ್ಲಿ ಈ ಸಾಧನೆಗೈದ ಡುಮಾಸ್ ತಂಡ ಇದೀಗ ವಿಶ್ವದಾಖಲೆ ಮಾಡಿದೆ.
ಈ ಸಾಹಸದ ಪೋರ್ಷೆ 911 eFuel ಚಾಲನೆಯಲ್ಲಿದೆ. “ಡೋರಿಸ್” ಮತ್ತು “ಎಡಿತ್” ಎಂಬ ಅಡ್ಡಹೆಸರಿನ 911 ಅನ್ನು ಪೋರ್ಷೆ ಸಹಯೋಗದೊಂದಿಗೆ RD ಲಿಮಿಟೆಡ್ ಅಭಿವೃದ್ಧಿಪಡಿಸಿದೆ. ಡುಮಾಸ್ ದಾಖಲೆ ಮಾಡಿರುವುದು “ಎಡಿತ್” ರೂಪಾಂತರದಲ್ಲಿ.
ವಿಶ್ವದಾಖಲೆ ಸೃಷ್ಟಿಸುವ ಸಾಧನೆಗಿಳಿದ ತಂಡವು ನಿಧಾನವಾಗಿ ಎತ್ತರಕ್ಕೆ ಒಗ್ಗಿಕೊಳ್ಳಲು ಎರಡು ವಾರಗಳನ್ನು ತೆಗೆದುಕೊಂಡಿತು. ದಿನದಿಂದ ದಿನಕ್ಕೆ ಎತ್ತರವನ್ನು ಏರುತ್ತಾ ಅಭ್ಯಾಸ ಮಾಡಿತು. ಈ ವೇಳೆ ಜಲ್ಲಿ, ಜ್ವಾಲಾಮುಖಿಯಂತಹ ಹಲವು ಅಡೆತಡೆಗಳನ್ನು ಎದುರಿಸಿ ಇಳಿಜಾರುಗಳನ್ನು ರೂಪಿಸಿತು. ವಿಶ್ವದಾಖಲೆಗೆಂದು
ಡಿಸೆಂಬರ್ 2 ರ ಶನಿವಾರದಂದು ಬೆಳಗ್ಗೆ 3.30ಕ್ಕೆ ಹೊರಟ ತಂಡ ಮಧ್ಯಾಹ್ನ 3.38ಕ್ಕೆ ಶಿಖರ ತಲುಪಿ ದಾಖಲೆ ಮಾಡಿತು.