
ನವದೆಹಲಿ: ಕನ್ನಾಟ್ ಪ್ಲೇಸ್‌ನ ಹೆಚ್ ಬ್ಲಾಕ್ ನಲ್ಲಿರುವ ಎಲ್‌ಇಡಿ ಪರದೆಯೊಂದರಲ್ಲಿ ಅಶ್ಲೀಲ ಕ್ಲಿಪ್ ಪ್ಲೇ ಆದ ಘಟನೆ ನಡೆದಿದೆ. ಇದನ್ನು ದಾರಿಹೋಕರೊಬ್ಬರು ಗಮನಿಸಿದ ನಂತರ ಘಟನೆ ಬೆಳಕಿಗೆ ಬಂದಿದೆ.
ಎಲ್ಇಡಿ ಪರದೆಯನ್ನು ಸಾಮಾನ್ಯವಾಗಿ ಜಾಹೀರಾತುಗಳನ್ನು ಪ್ರದರ್ಶಿಸಲು ಬಳಸಲಾಗುತ್ತದೆ. ಆದರೆ, ಈ ಎಲ್‌ಇಡಿ ಬೋರ್ಡ್ ಹ್ಯಾಕ್ ಮಾಡಿ ಅಶ್ಲೀಲ ವೀಡಿಯೊ ಪ್ಲೇ ಮಾಡಲಾಗಿದೆ: ಐಕಾನಿಕ್ ಲ್ಯಾಂಡ್‌ಮಾರ್ಕ್ ಬಳಿ ವಯಸ್ಕರ ವೀಡಿಯೊ ಪ್ಲೇ ಮಾಡಲಾಗಿದೆ. ಪೊಲೀಸರ ಮಧ್ಯಪ್ರವೇಶದ ನಂತರ ಎನ್‌ಡಿಎಂಸಿ ಅಧಿಕಾರಿಗಳು ಪೋರ್ನ್ ಕ್ಲಿಪ್ ಅನ್ನು ತೆಗೆದುಹಾಕಿದ್ದಾರೆ.
ಘಟನೆಯ ನಂತರ ಎನ್‌ಡಿಎಂಸಿ ಹೇಳಿಕೆ ನೀಡಿದೆ. ಎರಡೂ ಪ್ಯಾನೆಲ್‌ಗಳು ಅಂತರಾಷ್ಟ್ರೀಯ ಗುಣಮಟ್ಟವನ್ನು ಹೊಂದಿವೆ ಮತ್ತು ಫೈರ್‌ವಾಲ್ ಮತ್ತು ಆಂಟಿವೈರಸ್‌ನೊಂದಿಗೆ ಸಂಪೂರ್ಣವಾಗಿ ಸುರಕ್ಷಿತವಾಗಿರುವ ಸರ್ವರ್‌ನಿಂದ ನಿಯಂತ್ರಿಸಲ್ಪಡುತ್ತವೆ. ಎನ್‌ಡಿಎಂಸಿ ಪ್ರದೇಶಗಳಲ್ಲಿ ಸಾರ್ವಜನಿಕ ಬಳಕೆಗಾಗಿ ನಾವು ಹಾಟ್‌ಸ್ಪಾಟ್‌ಗಳನ್ನು ಉಚಿತವಾಗಿ ಒದಗಿಸುತ್ತಿದ್ದೇವೆ ಎಂದು ತಿಳಿಸಲಾಗಿದೆ.
ನಗರದ ಅಧಿಕಾರಿಗಳು 50 ವಿಶಿಷ್ಟ ಸ್ಥಳಗಳಲ್ಲಿ ಜಾಹೀರಾತು ಫಲಕಗಳನ್ನು ಹಾಕಿದ್ದಾರೆ. ತಮ್ಮ ಭದ್ರತಾ ಫೈರ್‌ವಾಲ್ ಅನ್ನು ಹೇಗೆ ಕಡೆಗಣಿಸಲಾಗಿದೆ ಎಂಬ ಬಗ್ಗೆ ಪರಿಶೀಲನೆ ನಡೆಸಲಾಗಿದೆ. ನಮ್ಮ ರಾಜಧಾನಿಯ ಪ್ರಮುಖ ವಾಣಿಜ್ಯ ಕ್ವಾರ್ಟರ್‌ನ ಹೃದಯಭಾಗದಲ್ಲಿ ನಡೆದ ಅಹಿತಕರ ಘಟನೆಯ ಬೆನ್ನಲ್ಲೇ NDMC ಭದ್ರತೆ ಹೆಚ್ಚಿಸಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಹೇಳಲಾಗಿದೆ.