ತಮಿಳಿನ ಜನಪ್ರಿಯ ರಾಪರ್ ದೇವ್ ಆನಂದ್ ಅವರನ್ನು ಅಪಹರಣ ಮಾಡಲಾಗಿದೆ.
ಅವರು ಮನೆಗೆ ಹಿಂದಿರುಗುತ್ತಿದ್ದಾಗ ಚೆನ್ನೈ ಸಮೀಪ ಚೆನ್ನೈ-ಬೆಂಗಳೂರು ಹೆದ್ದಾರಿಯಲ್ಲಿ ಅಪಹರಿಸಲಾಗಿದೆ. ಸಿಸಿ ಕ್ಯಾಮೆರಾ ದೃಶ್ಯಗಳನ್ನು ಕಲೆಹಾಕಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ ರಾಪರ್ ಕುಟುಂಬವು ನಾಪತ್ತೆ ದೂರು ದಾಖಲಿಸಿದ್ದು ತನಿಖೆ ವೇಳೆ ರಾಪರ್ ದೇವ್ ಆನಂದ್ ರನ್ನು ಹತ್ತು ಸದಸ್ಯರ ಗ್ಯಾಂಗ್ ಬುಧವಾರ ರಾತ್ರಿ ಅಪಹರಿಸಿದೆ ಎಂದು ತಿಳಿದುಬಂದಿದೆ.
ಪೊಲೀಸ್ ಪ್ರಧಾನ ಕಚೇರಿಯ ಹಿರಿಯ ಪೊಲೀಸ್ ಅಧಿಕಾರಿಯ ಪ್ರಕಾರ, ಚೆನ್ನೈನಲ್ಲಿ ದೇವ್ ಆನಂದ್ ಅವರ ಸಹೋದರ ವ್ಯಕ್ತಿಯೊಬ್ಬರಿಂದ 2.5 ಕೋಟಿ ರೂಪಾಯಿ ಸಾಲ ಪಡೆದಿದ್ದರು, ಆದರೆ ಹಣವನ್ನು ಹಿಂತಿರುಗಿಸಿರಲಿಲ್ಲ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಕೆಲವು ವಿವಾದಗಳು ನಡೆದಿದ್ದು, ದೇವ್ ಆನಂದ್ ಅಪಹರಣಕ್ಕೂ ಇದಕ್ಕೂ ಏನಾದರೂ ಸಂಬಂಧವಿದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.