ಜಪಾನ್: ಯಾವುದಾದರೂ ಆಹಾರಕ್ಕೆ ಆರ್ಡರ್ ಮಾಡಿದರೆ ಅಬ್ಬಬ್ಬಾ ಎಂದರೆ ಒಂದು ಗಂಟೆ ಕಾಯಬಹುದು ಅಲ್ಲವೆ? ಅದಕ್ಕಿಂತ ಹೆಚ್ಚಿನ ಅವಧಿಯಾದರೆ ಸಿಟ್ಟು ನೆತ್ತಿಗೇರುವುದು ಗ್ಯಾರೆಂಟಿ. ಆದರೆ ಇಲ್ಲೊಂದು ಕಡೆ ನೀವು ಅಹಾರ ಆರ್ಡರ್ ಮಾಡಿದರೆ ಗಂಟೆ, ದಿನ ಅಲ್ಲ. ಬರೋಬ್ಬರಿ 30 ವರ್ಷ ಕಾಯಬೇಕು !
ಪಶ್ಚಿಮ ಜಪಾನ್‌ನ ಹ್ಯೊಗೊ ಪ್ರಿಫೆಕ್ಚರ್‌ನಲ್ಲಿರುವ ಟಕಾಸಾಗೊ ನಗರದಲ್ಲಿ ಕುಟುಂಬ ನಡೆಸುತ್ತಿರುವ ಮಾಂಸದ ಅಂಗಡಿಯಾದ ಅಸಹಿಯಾದಿಂದ ಗ್ರಾಹಕರು ಆರ್ಡರ್ ಮಾಡಿದರೆ ಫ್ರೀಜ್ ಮಾಡಿದ ಕೋಬ್ ಬೀಫ್ ಕ್ರೋಕೆಟ್‌ಗಳನ್ನು ಸ್ವೀಕರಿಸಲು ಮೂರು ದಶಕಗಳವರೆಗೆ ಕಾಯಬೇಕಾಗುತ್ತದೆ !
ಅಂಗಡಿಯು 1926 ರಿಂದ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದೆ. ಜಾಗತಿಕ ಯುದ್ಧ II ರ ನಂತರದ ಮೆನುವಿನಲ್ಲಿ ಕೋಬ್ ಬೀಫ್ ಕ್ರೋಕ್ವೆಟ್ ಅಡುಗೆ ಸೇರ್ಪಡೆಯಾಗಿದೆ. ಇದಾದ ಬಳಿಕ ಈ ಅಂಗಡಿಯ ಉತ್ತಮ ಆಹಾರವನ್ನು ಒದಗಿಸುತ್ತ ಬಂದಿದ್ದು, 2000 ರ ದಶಕದ ಆರಂಭದಲ್ಲಿ ಈ ಮೆನುವಿಗೆ ಡೀಪ್-ಫ್ರೈಡ್ ಆಲೂಗಡ್ಡೆ ಮತ್ತು ಬೀಫ್ ಡಂಪ್ಲಿಂಗ್‌ಗಳು ಸೇರ್ಪಡೆಯಾಗಿದ್ದವು. ಇದನ್ನು ಸವಿಯಲು ಜನರು ಕಿಲೋ ಮೀಟರ್ ಉದ್ದದ ಕ್ಯೂ ನಿಲ್ಲುತ್ತಿದ್ದರು.
ಇದೀಗ ಈ ವರ್ಷದ ಏಪ್ರಿಲ್‌ನಲ್ಲಿ, ಟ್ವಿಟರ್ ಬಳಕೆದಾರರು ತಮ್ಮ ಕ್ರೋಕೆಟ್‌ಗಳ ಆರ್ಡರ್‌ನ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಪಾರ್ಸೆಲ್‌ಗೆ ಶೀರ್ಷಿಕೆ ನೀಡಿ, “ನಾನು 9 ವರ್ಷಗಳ ಹಿಂದೆ ಆರ್ಡರ್ ಮಾಡಿದ ನನ್ನ ಕ್ರೋಕೆಟ್‌ಗಳು ಬಂದಿವೆ” ಎಂದು ಬರೆದಿದ್ದಾರೆ. ಅವರು ಸೆಪ್ಟೆಂಬರ್ 8, 2013 ರಂದು ಆದೇಶವನ್ನು ನೀಡಿದ್ದರು ಮತ್ತು ಅವರು ಏಳೂವರೆ ವರ್ಷಗಳ ಕಾಲ ಕಾಯಬೇಕು ಎಂದು ತಿಳಿಸಲಾಯಿತು.
ಆದಾಗ್ಯೂ, ಕ್ರೋಕ್ವೆಟ್‌ಗಳನ್ನು ತಯಾರಿಸಲು ಅಸಹಿಯಾಗೆ ಅಗತ್ಯವಿರುವ ಆಲೂಗಡ್ಡೆ ಹಾಗೂ ಮೂರು ವರ್ಷದ A5-ಶ್ರೇಣಿಯ ಕೋಬ್ ಗೋಮಾಂಸ ಸಿಗಲು ವಿಳಂಬ ಆಗುವ ಕಾರಣ ಮೂವತ್ತು ವರ್ಷವಾದರೂ ಕಾಯುವುದು ಅನಿವಾರ್ಯವಂತೆ, ಆದರೂ ಜನರ ಆರ್ಡರ್ಗಳು ಇದಾಗಲೇ ಹೆಚ್ಚಿರುವ ಕಾರಣದಿಂದ 2016ರಿಂದ ಆರ್ಡರ್ ತೆಗೆದುಕೊಳ್ಳುವುದನ್ನು ನಿಲ್ಲಿಸಲಾಗಿದೆಯಂತೆ!