ಥಾಯ್ಲೆಂಡ್ ಮಹಿಳೆಯೊಬ್ಬಳಿಗೆ ಬೆಲೆ ಬಾಳುವ ಮುತ್ತು ಸಿಕ್ಕಿದೆ. ಮಾರುಕಟ್ಟೆಯಿಂದ 163 ರೂಪಾಯಿ ಕೊಟ್ಟು ಖರೀದಿಸಿ ತಂದಿದ್ದ ಸಮುದ್ರದ ಆಹಾರ ಪದಾರ್ಥದಲ್ಲಿ ಆಕೆಗೆ ಕಿತ್ತಳೆ ಬಣ್ಣದ ಮುತ್ತು ಸಿಕ್ಕಿದೆ.
ಸಾಥೂನ್ ಪ್ರಾಂತ್ಯದಲ್ಲಿ ಕೊಡ್ಚಕಾರ್ನ್ ತಂತಿವಿವಾಟ್ಕುಲ್ ಎಂಬ ಮಹಿಳೆ ಜನವರಿ 30 ರಂದು 70 ಬಹ್ತ್ (163 ರೂಪಾಯಿ) ಕೊಟ್ಟು ಸಮುದ್ರದ ಬಸವನಹುಳುಗಳನ್ನು ಅಡುಗೆ ಮಾಡಲು ತಂದಿದ್ದಾಳೆ. ಅವುಗಳನ್ನು ಕತ್ತರಿಸಿ ಅಡುಗೆ ಮಾಡುವ ಸಂದರ್ಭದಲ್ಲಿ ಕಿತ್ತಳೆ ಬಣ್ಣದ ವಸ್ತುವೊಂದು ಕಂಡು ಬಂದಿದೆ.
ಅದು ಕಲ್ಲು ಇರಬಹುದೆಂದು ಸುಮ್ಮನಾಗಿದ್ದಾಳೆ. ಬಳಿಕ ಅದನ್ನು ಪರಿಶೀಲಿಸಿದಾಗ ಅದು ಬೆಲೆಬಾಳುವ ಮುತ್ತು ಎನ್ನುವುದು ಗೊತ್ತಾಗಿದೆ. 1.5 ಸೆಂಟಿಮೀಟರ್ ವ್ಯಾಸದ ಮುತ್ತು ಅದಾಗಿದ್ದು ಅದು ಬೆಲೆ ಬಾಳುವ ಮತ್ತು ಎನ್ನುವುದು ಗೊತ್ತಾಗಿದೆ.
ಬಸವನಹುಳು ಮಾರಾಟ ಮಾಡಿದ್ದ ವ್ಯಕ್ತಿ ಪಾಲು ಕೇಳಬಹುದೆಂದು ಇಷ್ಟು ದಿನ ವಿಷಯ ಮುಷಚ್ಚಿಟ್ಟಿದ್ದಾರೆ. ತನ್ನ ತಂದೆಯ ಚಿಕಿತ್ಸೆಯ ವೆಚ್ಚವನ್ನು ಭರಿಸುವುದಾಗಿ ಆಕೆಗೆ ಹಣ ಬೇಕಿರುವುದರಿಂದ ಅದಕ್ಕೆ ಸೂಕ್ತವಾದ ಬೆಲೆಯನ್ನು ನೀಡುವ ಸಂಭಾವ್ಯ ಖರೀದಿದಾರರನ್ನು ಕುಟುಂಬದವರು ಹುಡುಕಾಡುತ್ತಿದ್ದಾರೆ.
ಇಂತಹ ಮುತ್ತುಗಳು ಕಿತ್ತಳೆ, ಕಂದು ಬಣ್ಣದಿಂದ ಕೂಡಿರುತ್ತವೆ. ಕಿತ್ತಲೆ ಬಣ್ಣದ ಮುತ್ತಿಗೆ ಭಾರಿ ಬೆಲೆ ಇದೆ. ದಕ್ಷಿಣ ಚೀನಾ ಸಮುದ್ರ, ಮಯನ್ಮಾರ್ ಕರಾವಳಿಯ ಅಂಡಮಾನ್ ಸಮುದ್ರ ಪ್ರದೇಶದಲ್ಲಿ ಇಂತಹ ಮುತ್ತುಗಳು ಕಂಡುಬರುತ್ತವೆ. ವೊಲುಟಿಡೆ ಎಂಬ ಪರಭಕ್ಷಕ ಸಮುದ್ರದ ಬಸವನಹುಳುಗಳಿಂದ ಉತ್ಪತ್ತಿಯಾಗುತ್ತವೆ.