alex Certify ಕಣ್ಣಂಚನ್ನು ತೇವಗೊಳಿಸುತ್ತೆ ಬಡ ಮಕ್ಕಳ ಈ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣಂಚನ್ನು ತೇವಗೊಳಿಸುತ್ತೆ ಬಡ ಮಕ್ಕಳ ಈ ವಿಡಿಯೋ

ಶ್ರೀಮಂತ ಮಕ್ಕಳಿಗೆ, ಮಧ್ಯಮ ವರ್ಗದವರಿಗೆ ಇಷ್ಟಪಟ್ಟ ಬಟ್ಟೆ, ಆಟಿಕೆ ವಸ್ತು, ಊಟ-ತಿಂಡಿ ತೆಗೆದುಕೊಳ್ಳಲು ಸಾಕಷ್ಟು ಅನುಕೂಲಗಳು ಇರುತ್ತವೆ. ಆದರೆ ಬಡ ಮಕ್ಕಳಿಗೆ ಹೊತ್ತಿನ ಊಟಕ್ಕೂ ಪರದಾಡುವ ರಸ್ತೆ ಬದಿ ಕಷ್ಟಪಡುವ ಪುಟ್ಟಮಕ್ಕಳಿಗೆ ಇದೆಲ್ಲವೂ ಗಗನ ಕುಸುಮ…… ಬಡ ಬಾಲಕನೊಬ್ಬ ಹೋಟೆಲ್ ಮುಂದಿನ ಮೆನು ನೋಡಿ ಅದನ್ನು ಮುಟ್ಟಿ ಹೊಟ್ಟೆ ತುಂಬಿದವಂತೆ ಭಾವಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಒಂದು ಕ್ಷಣ ಕರುಳು ಚುರ್ ಎನ್ನುವಂತಿದೆ.

ಮೂವರು ಬಡ ಮಕ್ಕಳು ರಸ್ತೆಬದಿ ಹೋಗುತ್ತಿದ್ದಾಗ ಹೋಟೆಲ್ ಒಂದು ಕಂಡುಬರುತ್ತದೆ. ಹೋಟೆಲ್ ಮುಂದೆ ಹಾಕಿರುವ ಊಟ, ತಿಂಡಿಗಳ ಮೆನು ಲಿಸ್ಟ್ ಕಂಡು ಮಕ್ಕಳು ಆಸೆ ಕಂಗಳಿಂದ ನೋಡುತ್ತಾರೆ……. ಅದರಲ್ಲಿಯೂ ಓರ್ವ ಬಾಲಕ ರಸ್ತೆ ದಾಟಿ ಹೋಗಿ ಹೋಟೆಲ್ ಮುಂದಿನ ಮೆನು ಲಿಸ್ಟ್ ತುಂಬ ಕೈಯಾಡಿಸಿ ಚಿತ್ರದಲ್ಲಿದ್ದ ಊಟವನ್ನು ಮುಟ್ಟಿ ಮುಟ್ಟಿ ಬಾಯೊಳಗೆ ಹಾಕಿಕೊಂಡವನಂತೆ, ಬಳಿಕ ಹೊಟ್ಟೆ ತುಂಬಿದವನಂತೆ ಸಂತಸಪಡುತ್ತಾ ಬರುತ್ತಾನೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಈ ವಿಡಿಯೋ ಎಂಥವರ ಕಣ್ಣಂಚಲ್ಲೂ ನೀರು ತರಿಸುವಂತಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...