ಚಂಡೀಗಢ: ಪೂಂಚ್ ಭಯೋತ್ಪಾದಕ ದಾಳಿ ಬಿಜೆಪಿಯ ಚುನಾವಣಾ ಪೂರ್ವ ಸ್ಟಂಟ್ ಎಂದು ಪಂಜಾಬ್‌ನ ಮಾಜಿ ಮುಖ್ಯಮಂತ್ರಿ ಮತ್ತು ಜಲಂಧರ್‌ನ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಚರಣ್ ಜಿತ್ ಸಿಂಗ್ ಚನ್ನಿ ಭಾನುವಾರ ಹೇಳಿದ್ದಾರೆ.
ಶಾಸಿತಾರ್ ಬಳಿ ಶನಿವಾರ ಸಂಜೆ ನಡೆದ ದಾಳಿಯಲ್ಲಿ ಐವರು ಭಾರತೀಯ ವಾಯುಪಡೆ(ಐಎಎಫ್) ಸಿಬ್ಬಂದಿ ಗಾಯಗೊಂಡರು ಮತ್ತು ಅವರಲ್ಲಿ ಒಬ್ಬರು ನಂತರ ಮಿಲಿಟರಿ ಆಸ್ಪತ್ರೆಯಲ್ಲಿ ಹುತಾತ್ಮರಾಗಿದ್ದಾರೆ.
ಚುನಾವಣೆಗೆ ಮುನ್ನ ಇಂತಹ ದಾಳಿಗಳು ಬಿಜೆಪಿಯ ಚುನಾವಣಾ ಪೂರ್ವ ಸ್ಟಂಟ್ ಹೊರತು ಬೇರೇನೂ ಅಲ್ಲ ಎಂದು ಚನ್ನಿ ಪ್ರತಿಪಾದಿಸಿದ್ದಾರೆ.
ಪೂಂಚ್ ಜಿಲ್ಲೆಯಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿಂದೆ ಭಯೋತ್ಪಾದಕರ ಬೃಹತ್ ಶೋಧ ಕಾರ್ಯಾಚರಣೆ ಎರಡನೇ ದಿನಕ್ಕೆ ಕಾಲಿಟ್ಟಿದ್ದು, ಭಾನುವಾರ ಹಲವಾರು ಜನರನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.