ಬಾಲಿವುಡ್ನ ಹಾಟ್ ನಟಿ ಹಾಗೂ ಮಾಡೆಲ್ ಪೂನಂ ಪಾಂಡೆ ಪತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ತಮ್ಮ ಮೇಲೆ ಪತಿ ದೌರ್ಜನ್ಯ ನಡೆಸಿದ್ದಾರೆ ಎಂದು ಪೂನಂ ಪಾಂಡೆ ಆರೋಪಿಸಿದ್ದಾರೆ. ಪೂನಂ ಪಾಂಡೆ ತಲೆ, ಕಣ್ಣು ಹಾಗೂ ಮುಖಕ್ಕೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ.
ನಟಿ ಪೂನಂ ಪಾಂಡೆ ಪತಿ, ನಿರ್ದೇಶಕ, ನಿರ್ಮಾಪಕ ಹಾಗೂ ಸಂಪಾದಕ ಸ್ಯಾಮ್ ಬಾಂಬೆ ಅಲಿಯಾಸ್ ಸ್ಯಾಮ್ ಅಹಮದ್ ಬಾಂಬೆಯನ್ನು ಮುಂಬೈ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಆಸ್ಪತ್ರೆಗೆ ದಾಖಲಾಗಿರುವ ಪೂನಂ ಪಾಂಡೆಯ ತಲೆ, ಕಣ್ಣು ಹಾಗೂ ಮುಖಗಳಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ.
ದೈಹಿಕ ಹಲ್ಲೆ ನಡೆಸಿದ್ದಾರೆ ಎಂದು ಪೂನಂ ಪಾಂಡೆ ದೂರು ನೀಡಿದ ಬಳಿಕ ಅವರ ಪತಿಯನ್ನು ನಿನ್ನೆ ಬಂಧಿಸಿದ್ದೇವೆ. ಪ್ರಸ್ತುತ ನಟಿ ಪೂನಂ ಪಾಂಡೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಅಂದಹಾಗೆ ಪೂನಂ ಪಾಂಡೆ ತಮ್ಮ ಪತಿಯ ವಿರುದ್ಧ ದೂರು ನೀಡಿರುವುದು ಇದೇ ಮೊದಲೇನಲ್ಲ. ಕಳೆದ ವರ್ಷ ಕೂಡ ಪೂನಂ ಪಾಂಡೆ ತಮ್ಮ ವಿವಾಹವಾದ ಎರಡು ವಾರಗಳ ಬಳಿಕ ಸ್ಯಾಮ್ ವಿರುದ್ಧ ಹಲ್ಲೆ, ಕಿರುಕುಳ ಹಾಗೂ ಬೆದರಿಕೆ ಹಾಕಿರುವ ಬಗ್ಗೆ ದೂರು ನೀಡಿದ್ದರು. ಹೀಗಾಗಿ ವಿವಾಹ ಸಂಬಂಧವನ್ನು ಮುರಿದುಕೊಳ್ಳಲು ನಿರ್ಧರಿಸಿದ್ದರು. ಕಳೆದ ವರ್ಷ ಸ್ಯಾಮ್ರನ್ನು ಗೋವಾದಲ್ಲಿ ಬಂಧಿಸಲಾಗಿತ್ತು.