ರಾಯಚೂರು : ಇಂದು ಚಂದ್ರಗ್ರಹಣ ಹಿನ್ನೆಲೆಯಲ್ಲಿ ಮಂತ್ರಾಲಯದಲ್ಲಿ ಮದ್ಯಾಹ್ನ 12 ಗಂಟೆ ಬಳಿಕ ಪೂಜೆ ಪುರಸ್ಕಾರಗಳು ಬಂದ್ ಆಗಲಿವೆ. ಆದರೆ ರಾಯರ ದರ್ಶನಕ್ಕೆ ಭಕ್ತರಿಗೆ ಎಂದಿನಂತೆ ಅವಕಾಶ ಇರಲಿದೆ.
ಇಂದು ಸಂಜೆ ವೇಳೆ ನಡೆಯಬೇಕಿದ್ದ ಮಹಾ ಮಂಗಳಾರತಿ ಹಾಗೂ ರಥೋತ್ಸವದ ಕಾರ್ಯಕ್ರಮಗಳು ಮದ್ಯಾಹ್ನದೊಳಗೆ ಪೂರ್ಣಗೊಳ್ಳಲಿವೆ. ಭಕ್ತರ ವಿಶೇಷ ಸೇವಾ ಕಾರ್ಯಗಳು ಬಂದ್ ಆಗಲಿವೆ. ಆದರೆ ರಾಯರ ದರ್ಶನಕ್ಕೆ ಎಂದಿನಂತೆ ಅವಕಾಶ ನೀಡಲಾಗುತ್ತದೆ. ಚಂದ್ರಗ್ರಹಣ ಹಿನ್ನೆಲೆ ಅನ್ನಪ್ರಸಾದವೂ ಇಂದು ಇರುವುದಿಲ್ಲ ಎಂದು ಪ್ರಕಟಣೆ ಹೊರಡಿಸಿದೆ.
ಇಂದು ಈ ವರ್ಷದ ಕೊನೇ ಚಂದ್ರಗ್ರಹಣ ಹಿನ್ನೆಲೆಯಲ್ಲಿ ರಾಜ್ಯದ ಹಲವು ದೇವಾಲಯಗಳು ಬಂದ್ ಆಗಲಿವೆ. ಬೆಂಗಳೂರಿನ ಪ್ರಮುಖ ದೇವಾಲಯಗಳಾದ ಗವಿ ಗಂಗಾಧರೇಶ್ವರ, ಬನಶಂಕರಿ ದೇವಿ ದೇವಸ್ಥಾ ಸೇರಿದಂತೆ ಹಲವು ದೇವಾಲಯಗಳು ಸೇರಿ ಹಲವು ದೇವಾಲಯಗಳು ಮಧ್ಯಾಹ್ನದ ಬಳಿಕ ಬಾಗಿಲು ಮುಚ್ಚಲಿವೆ.