ಬಾಲಿವುಡ್ ನಟಿ ಪೂಜಾ ಹೆಗ್ಡೆ ವಾರಾಂತ್ಯದಲ್ಲಿ ಜಿಮ್ ನಲ್ಲಿ ಬೆವರು ಹರಿಸುತ್ತಾರೆ. ಜಿಮ್ ಗೆ ವರ್ಕೌಟ್ ಮಾಡಲು ತೆರಳುವಾಗಲೂ ಇವರು ಹಾಟ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಾರೆ.
ಕೆಂಪು ಬಣ್ಣ ಬಾಲಿವುಡ್ ಬೆಡಗಿಯರ ಅಚ್ಚುಮೆಚ್ಚಿನ ಬಣ್ಣವೇನೋ..! ಯಾಕಂದ್ರೆ ಹಲವು ಮಂದಿ ಬಾಲಿವುಡ್ ಕಲಾವಿದರು ಕೆಂಪು ಬಣ್ಣದ ಉಡುಗೆಯನ್ನು ತೊಡುತ್ತಾರೆ. ಇದರಿಂದ ನಟಿ ಪೂಜಾ ಹೆಗ್ಡೆಯೂ ಹೊರತಾಗಿಲ್ಲ. ಉತ್ತಮ ಫಿಟ್ನೆಸ್ ಗಾಗಿ ಜಿಮ್ ಗೆ ತೆರಳುವಾಗಲೂ ನಟಿ ಕೆಂಪು ಉಡುಗೆ ಕೆಂಪು ಶೂನಲ್ಲಿ ಕಂಗೊಳಿಸಿದ್ದಾರೆ.
ಕೆಂಪು ಬಣ್ಣದ ಟೀ ಶರ್ಟ್ ಹಾಗೂ ಕೆಂಪು ಬಣ್ಣದ ಪ್ಯಾಂಟ್ ತೊಟ್ಟಿರುವ ಪೂಜಾ ಹೆಗ್ಡೆ, ಜಾಕೆಟ್ ಅನ್ನು ತನ್ನ ಸೊಂಟದಲ್ಲಿ ಹಾಕಿದ್ದಾರೆ. ಜೊತೆಗೆ ಕೆಂಪು ಬಣ್ಣದ ಶೂ ಧರಿಸಿದ್ದಾರೆ. ಅಲ್ಲದೆ ಪೂಜಾ ಹೆಗ್ಡೆ ಹ್ಯಾಂಡ್ ಬ್ಯಾಗನ್ನು ಕೂಡ ತೊಟ್ಟಿದ್ದಾರೆ. ಇನ್ನು ಈ ಹ್ಯಾಂಡ್ ಬ್ಯಾಗ್ ಬೆಲೆ ಕೇಳಿದ್ರೆ ನೀವು ಖಂಡಿತಾ ನಿಬ್ಬೆರಗಾಗ್ತೀರಾ..! ಆ ಪುಟ್ಟ ಲೂಯಿ ವಿಟಾನ್ ಕ್ರೋಸೆಟ್ ಹ್ಯಾಂಡ್‌ಬ್ಯಾಗ್ ಬೆಲೆ ಬರೋಬ್ಬರಿ 1.4 ಲಕ್ಷ ರೂಪಾಯಿಗಳು..!