ಭಾರತದಲ್ಲಿ ಮಾಲಿನ್ಯ ಸಮಸ್ಯೆ ವರ್ಷದಿಂದ ವರ್ಷಕ್ಕೆ ಬಿಗಡಾಯಿಸುತ್ತಲೇ ಇದೆ. ಗಾಬರಿ ತರುವ ಆಶ್ಚರ್ಯಕರ ಸಂಗತಿ ಎಂದರೆ 2019 ರಲ್ಲಿ ಭಾರತದಲ್ಲಿ ಮಾಲಿನ್ಯದಿಂದಾಗಿ 23.5 ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ಇದು ಜಾಗತಿಕವಾಗಿ ಎಲ್ಲಾ ದೇಶಗಳಲ್ಲಿ ಅತಿ ಹೆಚ್ಚು ಎಂದು ʼದಿ ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ʼ ಜರ್ನಲ್‌ನಲ್ಲಿ ಪ್ರಕಟವಾದ ಹೊಸ ಅಧ್ಯಯನದ ವರದಿಯಲ್ಲಿ ಉಲ್ಲೇಖವಾಗಿದೆ.
ಪಿಎಂ2.5 ಮಾಲಿನ್ಯಕಾರಕವು ಹೆಚ್ಚಿನ ವಾಯುಮಾಲಿನ್ಯ ಸಾವುಗಳಿಗೆ ಕಾರಣವಾಗಿದ್ದು, ಇದರಿಂದಾಗಿಯೇ 16.7 ಲಕ್ಷ ಸಾವುಗಳು ಸಂಭವಿಸಿವೆ ಎಂದು ಹೇಳಲಾಗಿದೆ.
ಮಾಂಸಾಹಾರ ಸೇವಿಸುವ ಪುರುಷರ ಸಂಖ್ಯೆಯಲ್ಲಿ ಹೆಚ್ಚಳ; ಸಮೀಕ್ಷೆಯಲ್ಲಿ ಬಹಿರಂಗ
ಪಿಎಂ 2.5 ಗಾಳಿಯಲ್ಲಿ ಸಣ್ಣ ಮಾಲಿನ್ಯ ಕಣಗಳಾಗಿದ್ದು ಎರಡೂವರೆ ಮೈಕ್ರಾನ್ ಅಥವಾ ಅದಕ್ಕಿಂತ ಕಡಿಮೆ ವಿಸ್ತಾರವಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಮಾಲಿನ್ಯದಿಂದ ಜನರ ಆರೋಗ್ಯದ ಮೇಲೆ ಪರಿಣಾಮ ಅಗಾಧವಾಗಿವೆ. ಕಡಿಮೆ ಮತ್ತು ಮಧ್ಯಮ ಆದಾಯದ ದೇಶಗಳು ಈ ಹೊರೆ ಹೊತ್ತುಕೊಳ್ಳುತ್ತವೆ. ಹಾಗೆಯೇ ಮಾಲಿನ್ಯ ತಡೆಗಟ್ಟುವಿಕೆಯನ್ನು ಅಂತರರಾಷ್ಟ್ರೀಯ ಅಭಿವೃದ್ಧಿ ಕಾರ್ಯಸೂಚಿಯಲ್ಲಿ ಹೆಚ್ಚಾಗಿ ಕಡೆಗಣಿಸಲಾಗಿದೆ ಎಂದು ಅಧ್ಯಯನದ ಪ್ರಮುಖ ಲೇಖಕ ರಿಚರ್ಡ್ ಫುಲ್ಲರ್ ಹೇಳಿದ್ದಾರೆ.
ಅಧ್ಯಯನದ ಪ್ರಕಾರ, ಮನೆಯಲ್ಲಿ ಬಯೋಮಾಸ್ ಸುಡುವುದು ಭಾರತದಲ್ಲಿ ವಾಯು ಮಾಲಿನ್ಯದ ಸಾವುಗಳಿಗೆ ಏಕೈಕ ದೊಡ್ಡ ಕಾರಣವಾಗಿದೆ, ನಂತರ ಕಲ್ಲಿದ್ದಲು ದಹನ ಮತ್ತು ಬೆಳೆ ಸುಡುವಿಕೆ ಎಂದು ಉಲ್ಲೇಖಿಸಲಾಗಿದೆ.
ಭಾರತವು ಶುದ್ಧ ಗಾಳಿ ಕಾರ್ಯಕ್ರಮ ಸೇರಿದಂತೆ ವಾಯು ಮಾಲಿನ್ಯವನ್ನು ನಿಭಾಯಿಸಲು ಹಲವಾರು ಸಾಧನ ಅಭಿವೃದ್ಧಿಪಡಿಸಿದೆ ಮತ್ತು 2019ರಲ್ಲಿ ವಾಯು ಗುಣಮಟ್ಟ ನಿರ್ವಹಣೆಗಾಗಿ ಆಯೋಗವನ್ನು ಪ್ರಾರಂಭಿಸಿದೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳು ಹೊರಸೂಸುವಿಕೆಯ ಮಾನದಂಡಗಳನ್ನು ವಿಧಿಸಲು ಮತ್ತು ಜಾರಿಗೊಳಿಸಲು ನಿಯಂತ್ರಕ ಅಧಿಕಾರವನ್ನು ಹೊಂದಿವೆ ಎಂದು ಅಧ್ಯಯನದ ಲೇಖಕರು ಗಮನಿಸಿ ದಾಖಲಿಸಿದ್ದಾರೆ.