ಜಾರ್ಖಂಡ್ ನ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಬಂಧನದ ಬಳಿಕ ಜಾರ್ಖಂಡ್ ನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದೆ.
ಒಂದು ದಿನದ ನಂತರ, ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) 43 ಶಾಸಕರು ಚಂಪೈ ಸೊರೆನ್ ಅವರ ಬೆಂಬಲದಲ್ಲಿದ್ದಾರೆ ಮತ್ತು ಜಾರ್ಖಂಡ್ ಸಮ್ಮಿಶ್ರ ಶಾಸಕರನ್ನು ಹೈದರಾಬಾದ್ ಗೆ ಕರೆದೊಯ್ಯುವ ಸಾಧ್ಯತೆಯಿದೆ ಎಂದು ತಿಳಿಸಿವೆ.
ಇದರ ನಡುವೆ ‘ಚಂಪೈ ಸೊರೇನ್ ನಿಯೋಗವು ರಾಜ್ಯ ಪಾಲರನ್ನು ಭೇಟಿ ಮಾಡಲಿದೆ. ಇಂದು ಸಂಜೆ 5 ಗಂಟೆ ವೇಳೆಗೆ ರಾಜ್ಯಪಾಲರನ್ನು ಭೇಟಿ ಮಾಡಿ ಹೊಸ ಸರ್ಕಾರ ರಚಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಕೂಡಲೇ ಹೇಮಂತ್ ಸೊರೆನ್ ಅವರನ್ನು ಬಂಧಿಸಲಾಯಿತು.
ಹೇಮಂತ್ ಸೊರೆನ್ ಅವರನ್ನು ಇಂದು ರಾಂಚಿಯ ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್ಎ) ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಚಾರಣೆಯ ಸಮಯದಲ್ಲಿ ಅಸಹಕಾರದ ಆಧಾರದ ಮೇಲೆ ತನಿಖಾ ಸಂಸ್ಥೆ ಸೊರೆನ್ ಅವರನ್ನು ಸುಮಾರು ಏಳರಿಂದ ಎಂಟು ದಿನಗಳವರೆಗೆ ಕಸ್ಟಡಿಗೆ ಪಡೆಯುವ ಸಾಧ್ಯತೆಯಿದೆ