ಪೋಲಿಷ್ ಬ್ಯಾಸ್ಕೆಟ್‌ಬಾಲ್ ಆಟಗಾರ ಪಿಯೋಟರ್ ಗ್ರಾಬೊವ್ಸ್ಕಿ ಅವರು 3.2 ಮೀಟರ್ ಜಿಗಿತದೊಂದಿಗೆ, ಹೊಸ ಸ್ಲ್ಯಾಮ್ ಡಂಕ್ ವಿಶ್ವ ದಾಖಲೆಯನ್ನು ಸ್ಥಾಪಿಸಿದ್ದಾರೆ.
ಪಿಯೋಟರ್ ಗ್ರಾಬೊವ್ಸ್ಕಿ ಅವರು 10 ಅಡಿ, 5 ಇಂಚುಗಳಷ್ಟು ಜಿಗಿಯುವ ಮೂಲಕ ಮತ್ತು ಬ್ಯಾಸ್ಕೆಟ್‌ಬಾಲ್ ಅನ್ನು ಹೂಪ್‌ನಲ್ಲಿ ಶೂಟ್ ಮಾಡುವ ಮೂಲಕ ಈ ಸಾಧನೆ ಮಾಡಿದ್ದು, ಅವರ ಹೆಸರು ಈಗ ಗಿನ್ನೆಸ್ ವಿಶ್ವದಾಖಲೆಯ ಪುಟ ಸೇರಿದೆ.
ಬಾಸ್ಕೆಟ್‌ಬಾಲ್‌ನ ಹೂಪ್ ಅನ್ನು (ಬಾಲ್ ಹಾಕುವ ಬುಟ್ಟಿ) ಸಾಮಾನ್ಯಕ್ಕಿಂತ ಆರು ಇಂಚಿನಷ್ಟು ಎತ್ತರಕ್ಕೆ ಇಡಲಾಗಿತ್ತು. ಅದರಲ್ಲಿ ಬಾಲ್ ಹಾಕುವ ಮೂಲಕ ಆಟಗಾರ ದಾಖಲೆ ಬರೆದಿದ್ದಾರೆ. ಹೂಪ್ ಇರುವಷ್ಟು ಎತ್ತರಕ್ಕೆ ಅವರು ಜಿಗಿದಿರುವುದು ಹಿಂದೆಂದೂ ಆಗದ ಅದ್ಭುತ ಎಂದು ತಜ್ಞರು ಬಣ್ಣಿಸಿದ್ದಾರೆ.
ಕೃತಕ ಬುದ್ಧಿಮತ್ತೆಯ ಮೋಷನ್ ಸೆನ್ಸಿಂಗ್ ತಂತ್ರಜ್ಞಾನವನ್ನು ಹೊಂದಿರುವ ಸ್ಮಾರ್ಟ್‌ಫೋನ್ ಬಳಸಿ ಈ ದಾಖಲೆಯ ಮೌಲ್ಯಮಾಪನ ಮಾಡಲಾಗಿದೆ. ಇಷ್ಟು ಎತ್ತರದ ಶೂಟ್‌ನ ಮೌಲ್ಯ ಮಾಪನ ಮಾಡುವ ಯಾವುದೇ ತಂತ್ರಜ್ಞಾನ ಸದ್ಯ ಹಲವು ದೇಶಗಳಲ್ಲಿ ಇಲ್ಲ. ಈ ಹಿನ್ನೆಲೆಯಲ್ಲಿ ಇದನ್ನು ಚೀನಾದ ಫೋನ್ ಉತ್ಪಾದನಾ ಬ್ರಾಂಡ್ ಪ್ರಾಯೋಜಿಸಿದ್ದು, ಅದರ ಮೂಲಕ ಎತ್ತರದ ಮೌಲ್ಯಮಾಪನ ಮಾಡಲಾಗಿದೆ.