ನವದೆಹಲಿ: 2024ರ ಏಪ್ರಿಲ್ -ಮೇ ನಲ್ಲಿ ನಡೆಯಲಿರುವ ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಿ ಮತ್ತೆ ಅಧಿಕಾರಕ್ಕೆರಲಿದೆ ಎಂದು ಜಾಗತಿಕ ಆರ್ಥಿಕ ರೇಟಿಂಗ್ ಏಜೆನ್ಸಿ ಫಿಚ್ ಭವಿಷ್ಯ ನುಡಿದಿದೆ.
ಬಹುಮತದ ಪ್ರಮಾಣ ಬದಲಾಗಬಹುದು ಎಂದು ಫಿಚ್ ತಿಳಿಸಿದೆ. ಏಪ್ರಿಲ್, ಮೇ ನಲ್ಲಿ ನಡೆಯುವ ಸಾರ್ವತ್ರಿಕ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ದೊರೆಯುವ ಬಹುಮತದ ಪ್ರಮಾಣ ಆಡಳಿತದ ಸುಧಾರಣಾ ಕಾರ್ಯ ಸೂಚಿ ಮೇಲೆ ಪ್ರಭಾವ ಬೀರಬಹುದು ಎಂದು ತಿಳಿಸಿದೆ.
ಪ್ರಸ್ತುತ ಅಧಿಕಾರದಲ್ಲಿರುವ ಪಕ್ಷಗಳು ಭಾರತ ಮತ್ತು ಬಾಂಗ್ಲಾದೇಶದಲ್ಲಿ ಮತ್ತೊಮ್ಮೆ ಅಧಿಕಾರಕ್ಕೇರುವ ಸಾಧ್ಯತೆ ಇದೆ. ಇದರಿಂದ ಈ ಹಿಂದಿನ ನೀತಿಗಳೇ ನಿರಂತರವಾಗಿ ಮುಂದುವರೆಯಲು ಅನುಕೂಲವಾಗುತ್ತದೆ ಎಂದು ಫಿಚ್ ಹೇಳಿದೆ.
2014ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮೊದಲ ಬಾರಿಗೆ ಅಧಿಕಾರಕ್ಕೆ ಬಂದಿತ್ತು. 2019ರ ಸಾರ್ವತ್ರಿಕ ಚುನಾವಣೆಯಲ್ಲಿಯೂ ಭಾರಿ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೇರಿತ್ತು. 2024ರ ಸಾರ್ವತ್ರಿಕ ಲೋಕಸಭೆ ಚುನಾವಣೆ ಏಪ್ರಿಲ್ ಮೇ ನಲ್ಲಿ ನಡೆಯಲಿದ್ದು, ಮೂರನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.