ಬೆಂಗಳೂರು: ಪೊಲೀಸ್ ಇಲಾಖೆಯ ಎಲ್ಲಾ ವಾಹನಗಳ ಮೇಲೆ ಕಡ್ಡಾಯವಾಗಿ ಪೊಲೀಸ್ ಎಂದು ಸ್ಟಿಕರಿಂಗ್ ಮಾಡಿಸಲು ಡಿಜಿ ಸೂಚನೆ ಮೇರೆಗೆ ಎಡಿಜಿಪಿ ಎಸ್. ಮುರುಗನ್ ಆದೇಶಿಸಿದ್ದಾರೆ.
ದ್ವಿಚಕ್ರ ವಾಹನಗಳಿಗೆ ಕನಿಷ್ಟ 8X2 ಇಂಚು, 4 ಚಕ್ರದ ವಾಹನಗಳಿಗೆ ಕನಿಷ್ಟ 12X3 ಇಂಚು ಪೊಲೀಸ್ ಎಂದು ಸ್ಟಿಕರ್ ಮಾಡಿಸಬೇಕು. ಕೆಲವು ವಾಹನಗಳ ಮೇಲಿನ ಸ್ಟಿಕರಿಂಗ್ ಅನ್ನು ಅಧಿಕಾರಿಗಳು ತೆಗೆಸಿರುವುದು ನಿಯಮಬಾಹಿರವಾಗಿದೆ. ಈ ಬಗ್ಗೆ ಎಲ್ಲಾ ಘಟಕ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ಪಾಲನಾ ವರದಿ ಸಲ್ಲಿಸಬೇಕು.
ಇಲಾಖೆಯ ಎಲ್ಲಾ ವಾಹನಗಳ ಮೇಲೆ ಕಡ್ಡಾಯವಾಗಿ ಪೊಲೀಸ್ ಎಂದು ಸ್ಟಿಕರಿಂಗ್ ಮಾಡಿಸಬೇಕು ಎಂದು ಸುತ್ತೋಲೆಯಲ್ಲಿ ಮುರುಗನ್ ಸೂಚನೆ ನೀಡಿದ್ದಾರೆ.