ಚಿತ್ರದುರ್ಗ: ಪೊಲೀಸ್ ಕಸ್ಟಡಿಯಲ್ಲಿದ್ದ ಎಸ್.ಕೆ. ಬಸವರಾಜನ್ ಅವರಿಗೆ ನೆರವು ನೀಡಿದ ಆರೋಪದ ಮೇಲೆ ಪೊಲೀಸ್ ಕಾನ್ಸ್ಟೇಬಲ್ ರಂಗಸ್ವಾಮಿ ಅವರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದೆ.
ಚಿತ್ರದುರ್ಗ ನಗರ ಠಾಣೆ ಕಾನ್ಸ್ಟೇಬಲ್ ರಂಗಸ್ವಾಮಿ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ. ಪರಶುರಾಮ್ ಆದೇಶಿಸಿದ್ದಾರೆ.
ಬಸವರಾಜನ್ ಅವರಿಗೆ ಪಿಸಿ ರಂಗಸ್ವಾಮಿ ಮೊಬೈಲ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಅಮಾನತು ಮಾಡಲಾಗಿದೆ. ರಂಗಸ್ವಾಮಿ ಅಮಾನತುಗೊಳಿಸಿ ಎಸ್.ಪಿ. ಪರುಶುರಾಮ್ ಆದೇಶಿಸಿದ್ದಾರೆ.