ಕಡು ಬೇಸಿಗೆಯಲ್ಲಿ ಕೋಟ್ ಧರಿಸಿ ರಸ್ತೆಯಲ್ಲಿ ಸಂಚರಿಸುತ್ತಿದ್ದ ವ್ಯಕ್ತಿಯನ್ನು ಲಂಡನ್‌ನಲ್ಲಿ ಪೊಲೀಸರು ತಡೆದು ವಿಚಾರಣೆ ಮಾಡಿದ ವಿಡಿಯೋ ಈಗ ವೈರಲ್ ಆಗಿದ್ದು, ಈ ಪ್ರಕರಣಕ್ಕೆ ವರ್ಣಬೇಧ ನೀತಿಯ ಲೇಪನವಾಗಿದೆ.
20 ವರ್ಷದ ಆಫ್ರಿಕನ್-ಅಮೆರಿಕನ್ ವ್ಯಕ್ತಿಯನ್ನು ದಕ್ಷಿಣ ಲಂಡನ್‌ನ ಕ್ರೊಯ್ಡಾನ್‌ನಲ್ಲಿ ಪೊಲೀಸರು ತಡೆದು ಸರ್ಚ್ ಮಾಡಿದ್ದಾರೆ. ಇಂಗ್ಲೆಂಡ್ ಹವಾಮಾನಕ್ಕೆ ಸೂಕ್ತವಲ್ಲದ ಬಟ್ಟೆ ಧರಿಸಿದ್ದರ ಆಧಾರದ ಮೇಲೆ ಎರಿಕ್ ಬೋಟೆಂಗ್ ಎಂಬಾತನನ್ನು ತಡೆಯಲಾಗಿತ್ತು.
ಒಳ ಚರಂಡಿಯೊಳಗೆ ಬಿದ್ದ ಕರು: 4 ಗಂಟೆಗಳ ಕಾರ್ಯಾಚರಣೆ ಬಳಿಕ ರಕ್ಷಣೆ
ಅಂಗಡಿಯಿಂದ ಟಾಯ್ಲೆಟ್ ರೋಲ್‌ಗಳನ್ನು ಖರೀದಿಸಿದ ನಂತರ ಕೆಲಸಕ್ಕೆ ಹೋಗುತ್ತಿದ್ದಾಗ ಆತನನ್ನು ಇಬ್ಬರು ಪೊಲೀಸ್ ಅಧಿಕಾರಿಗಳು ತಡೆದರು.
ಅಧಿಕಾರಿಗಳು ಎರಿಕ್ ಅನ್ನು ನಿಲ್ಲಿಸಿ, ಏಕೆ ಈ ವೇಳೆ ಕೋಟ್ ಧರಿಸಿದ್ದೀರೆಂದು ವಿಚಾರಿಸಲು ಪ್ರಾರಂಭಿಸಿದರು. ಪೋಲೀಸರ ಪ್ರಕಾರ, ಎರಿಕ್‌ನನ್ನು ನಿಲ್ಲಿಸಿದ ಪ್ರದೇಶವು ಮಾದಕದ್ರವ್ಯ ವ್ಯವಹಾರಕ್ಕೆ ಹೆಸರುವಾಸಿಯಾಗಿದೆ. ಡ್ರಗ್ಸ್ ದುರ್ಬಳಕೆ ಕಾಯ್ದೆಯಡಿ ಎರಿಕ್ ನನ್ನು ತಡೆದು ವಿಚಾರಣೆ ಮಾಡಲಾಗಿತ್ತೆಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಎರಿಕ್ ವೇಗವಾಗಿ ಸಾಗುತ್ತಿದ್ದಾಗ ಪೊಲೀಸರು ಆತನ ಫೋನ್ ಪಡೆದುಕೊಂಡು ಸಂಪೂರ್ಣ ಸಂಭಾಷಣೆಯನ್ನು ರೆಕಾರ್ಡ್ ಮಾಡಿದ್ದಾರೆ.
ವಿಡಿಯೊದಲ್ಲಿ, ಎರಿಕ್ “ನನಗೆ ಬೇಕಾದುದನ್ನು ನಾನು ಧರಿಸುತ್ತೇನೆ” ಎಂದು ಹೇಳುವುದನ್ನು ಕೇಳಬಹುದು. “ನೀವು ಏಕೆ ಕೋಟ್ ಧರಿಸಿದ್ದೀರಿ” ಎಂದು ಅಧಿಕಾರಿ ನಿರಂತರವಾಗಿ ಕೇಳುತ್ತಿದ್ದರು. ಈ ಚರ್ಚೆಯಲ್ಲಿ ಸ್ವಾರಸ್ಯಕರ ಪ್ರಶ್ನೆ ಹಾಗೂ ಉತ್ತರ ಕೇಳಿಬರುತ್ತದೆ.
ಈ ವಿಡಿಯೋ ಮೈಕ್ರೋ ಬ್ಲಾಗಿಂಗ್‌ನಲ್ಲಿ ಹಂಚಿಕೊಂಡಾಗಿನಿಂದ, 20 ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗಿದ್ದು ಸುಮಾರು 80,000 ಇಂಪ್ರೆಶನ್‌ಗಳನ್ನು ಸಂಗ್ರಹಿಸಿದೆ. ನೆಟ್ಟಿಗರು ಲೈಕ್ ಮಾಡಿ, ರಿಟ್ವೀಟ್‌ಗಳು ಮತ್ತು ಕಾಮೆಂಟ್ ಮಾಡಿದ್ದಾರೆ. ಇದೇ ವೇಳೆ ವರ್ಣಬೇಧ ನೀತಿ ಎಂದು ಅನೇಕರು ಉಲ್ಲೇಖಿಸಿದ್ದಾರೆ.