
ಬೆಂಗಳೂರು: ಪೊಲೀಸ್ ಠಾಣೆಗಳಲ್ಲಿ ಮಹಿಳಾ ಹೆಲ್ಪ್ ಡೆಸ್ಕ್ ಸ್ಥಗಿತಕ್ಕೆ ಆದೇಶ ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 31ರಿಂದ ಮಹಿಳಾ ಹೆಲ್ಪ್ ಡೆಸ್ಕ್ ಸೇವೆ ಸ್ಥಗಿತಗೊಳ್ಳಲಿದೆ.
ಮಹಿಳಾ ಹೆಲ್ಪ್ ಡೆಸ್ಕ್ ಯೋಜನೆಗೆ 3 ವರ್ಷಕ್ಕೆ ಮಾತ್ರ ಅನುದಾನ ಮೀಸಲಿಟ್ಟಿದ್ದ ಹಿನ್ನೆಲೆಯಲ್ಲಿ ಯೋಜನೆ ಕೈಬಿಡುವಂತೆ ಬೆಂಗಳೂರು ನಗರ ಆಡಳಿತ ಡಿಸಿಪಿ ಆದೇಶ ನೀಡಿದ್ದಾರೆ.
2021ರ ಜನವರಿ ತಿಂಗಳಿಂದ ಸೇಫ್ ಸಿಟಿ ಯೋಜನೆಯಡಿ ಮಹಿಳಾ ಹೆಲ್ಪ್ ಡೆಸ್ಕ್ ಸೇವೆ ಆರಂಭವಾಗಿತ್ತು. ಬೆಂಗಳೂರಿನಲ್ಲಿ ಠಾಣೆಗೆ ಇಬ್ಬರಂತೆ 250 ಸಿಬ್ಬಂದಿಗಳು ಸೇವೆ ಸಲ್ಲಿಸುತ್ತಿದ್ದರು. ಇದೀಗ ಡಿಸೆಂಬರ್ 31ರಿಂದ ಮಹಿಳಾ ಹೆಲ್ಪ್ ಡೆಸ್ಕ್ ಸೇವೆ ಸ್ಥಗಿತಗೊಳ್ಳಲಿದೆ.