ಕಲಬುರಗಿ: ಕಲಬುರಗಿ ಜಿಲ್ಲೆಯ ವಾಡಿ ಪೊಲೀಸ್ ಠಾಣೆಯ ಪೊಲೀಸರು ಠಾಣೆಯಲ್ಲಿಯೇ ಕುಳಿತು ಇಸ್ಪೀಡ್ ಆಡಿದ್ದ ವಿಡಿಯೋ ಭಾರಿ ವೈರಲ್ ಆಗಿತ್ತು. ಇದೀಗ ಈ ಪ್ರಕರಣ ಸಂಬಂಧ ಐವರು ಪೊಲೀಸರನ್ನು ಅಮನತು ಮಾಡಿ ಆದೇಶ ಹೊರಡಿಸಲಾಗಿದೆ.
ಹೊರಗಡೆ ಸಾರ್ವಜನಿಕರು ಇಸ್ಪೀಟ್ ಆಡಿದರೆ ದಾಳಿ ಮಾಡಿ ಕೇಸ್ ಹಾಕಬೇಕಿದ್ದ ಪೊಲೀಸರೇ ಕರ್ತವ್ಯ ಮರೆತು ಠಾಣೆಯಲ್ಲಿ ಇಸ್ಪೀಟ್ ಆಡಿದ್ದಾರೆ. ವಾಡಿ ಪೊಲೀಸ್ ಠಾಣೆಯ ಮೊದಲ ಅಂತಸ್ತಿನಲ್ಲಿ ಖಾಕಿ ಬಟ್ಟೆಯಲ್ಲಿಯೇ ನಾಲ್ಕೈದು ಜನ ಪೊಲೀಸರು ಇಸ್ಪೀಟ್ ಆಡಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಪೊಲೀಸ್ ಇಲಾಖೆಯೇ ತಲೆ ತಗ್ಗಿಸುವ ಕೆಲ ಇದಾಗಿದೆ. ಇದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸುಲು ಐವರು ಪೊಲೀಸ್ ಸಿಬ್ಬಂದಿಗಳನ್ನು ಸಸ್ಪೆಂಡ್ ಮಾಡಿದ್ದಾರೆ.
ಚಿತ್ತಾಪುರ ತಾಲೂಕಿನ ವಾಡಿ ಠಾಣೆಯ ಎಸ್ ಎಸ್ ಐ ಮಹಿಮೂಡ್ ಮಿಯಾ, ಹೆಡ್ ಕಾನ್ಸ್ ಟೇಬಲ್ ನಾಗರಾಜ್, ಸಾಯಿಬಣ್ನ, ಇಮಾಮ್, ಪಿಸಿ ನಾಗಭೂಷಣ್ ಅಮಾನತುಗೊಂಡವರು.