ಅಮೃತಸರ: ಪೊಲೀಸ್ ಠಾಣೆಯ ಮೇಲೆಯೇ ರಾಕೆಟ್ ದಾಳಿ ನಡೆಸಿರುವ ಘಟನೆ ಪಂಜಾಬ್ ನ ತರ್ನ್ ತರನ್ ಗಡಿಯಲ್ಲಿನ ಅಮೃತರಸರ ಭಟಿಂಡಾ ಹೆದ್ದಾರಿಯಲ್ಲಿ ನಡೆದಿದೆ.
ಹೆದ್ದಾರಿಯಲ್ಲಿನ ಸರ್ಹಾಲಿ ಪೊಲೀಸ್ ಠಾಣೆಯಲ್ಲಿ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಏಕಾಏಕಿ ಸ್ಫೋಟಕ ಅಪ್ಪಳಿಸಿದೆ. ಗ್ರೆನೇಡ್ ದಾಳಿ ಹಿಂದೆ ಪಾಕಿಸ್ತಾನ ಉಗ್ರರ ಕೈವಾಡದ ಶಂಕೆ ವ್ಯಕ್ತವಾಗಿದೆ.
ಅಪರಿಚಿತ ದಾಳಿಕೋರರು ರಾಕೆಟ್ ಲಾಂಚರ್ ತರಹದ ಸಾಧನವನ್ನು ರಾಷ್ಟ್ರೀಯ ಹೆದ್ದಾರಿ 54ರಿಂದ ಸರ್ಹಾಲಿ ಪೊಲೀಸ್ ಠಾಣೆ ಮೇಲೆ ಹಾರಿಸಿದ್ದಾರೆ. ದಾಳಿಯಿಂದ ಪೊಲೀಸ್ ಠಾಣೆ ಧ್ವಂಸಗೊಂಡಿದೆ. ಸ್ಥಳದಲ್ಲಿ ರಾಕೆಟ್ ಜೊತೆಗೆ ಪೈಪ್ ರೀತಿಯ ವಸ್ತುಗಳು ಕೂಡ ಠಾಣೆಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.