ಬೆಂಗಳೂರು: ಪೊಲೀಸ್ ಇಲಾಖೆಯಿಂದ 2022 -23 ನೇ ಸಾಲಿನಲ್ಲಿ 1500 ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುವುದು.
ಏಪ್ರಿಲ್ 1 ರಿಂದ ನೇಮಕಾತಿ ಪ್ರಕ್ರಿಯೆ ಆರಂಭಿಸಲು ಸಿದ್ಧತೆ ಕೈಗೊಂಡಿದೆ. 432 ಹುದ್ದೆಗಳನ್ನು ಹೈದರಾಬಾದ್-ಕರ್ನಾಟಕದ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಡಿಜಿ ಐಜಿಪಿ ಕಾರ್ಯಾಲಯದಿಂದ ಈಗಾಗಲೇ ನೇಮಕಾತಿ ಘಟಕಕ್ಕೆ ಪತ್ರ ಬರೆಯಲಾಗಿದ್ದು, ನೇಮಕಾತಿ ಪ್ರಕ್ರಿಯೆ ಆರಂಭಿಸಲು ಸೂಚನೆ ನೀಡಲಾಗಿದೆ.
ಕಲ್ಯಾಣ ಕರ್ನಾಟಕಕ್ಕೆ ಮೀಸಲಾಗಿರುವ 432 ಹುದ್ದೆಗಳಲ್ಲಿ ಬೆಂಗಳೂರು ನಗರಕ್ಕೆ 73, ಬೆಂಗಳೂರು ರೈಲ್ವೆಸ್ 17, ಕಲಬುರ್ಗಿ ಜಿಲ್ಲೆ 10, ಬೀದರ್ 79, ಯಾದಗಿರಿ 75, ಬಳ್ಳಾರಿ -ವಿಜಯನಗರ 107, ಕೊಪ್ಪಳ 38, ರಾಯಚೂರು 63 ಹುದ್ದೆಗಳನ್ನು ಮೀಸಲಾಗಿಡಲಾಗಿದೆ.
ಇತರೆ ವೃಂದಗಳ 1068 ಹುದ್ದೆಗಳಲ್ಲಿ ಬೆಂಗಳೂರು ನಗರ 520, ಮೈಸೂರು 25, ಮಂಗಳೂರು 50, ಹುಬ್ಬಳ್ಳಿ-ಧಾರವಾಡ 45, ಬೆಳಗಾವಿ 75, ಬೆಂಗಳೂರು ಜಿಲ್ಲೆ 60, ತುಮಕೂರು 45, ರಾಮನಗರ 30, ಶಿವಮೊಗ್ಗ 25, ದಕ್ಷಿಣಕನ್ನಡ 45 ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿನ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ರಾಜ್ಯ ಪೊಲೀಸ್ ಇಲಾಖೆ ವೆಬ್ ಸೈಟ್ ನಲ್ಲಿ ಅಧಿಸೂಚನೆ ಪ್ರಕಟಿಸಲಾಗುವುದು. ದ್ವಿತೀಯ ಪಿಯುಸಿ ಪಾಸಾದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬುದಾಗಿದೆ ಎಂದು ಹೇಳಲಾಗಿದೆ.