ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 454 ಪೋಲಿಸ್ ಬ್ಯಾಕ್ ಹುದ್ದೆಗಳಿಗೆ ಡಿಸೆಂಬರ್ 10 ರಂದು ಲಿಖಿತ ಪರೀಕ್ಷೆ ನಿಗದಿಯಾಗಿದೆ.
ಪೊಲೀಸ್ ಇಲಾಖೆಯ ಕಲ್ಯಾಣ ಕರ್ನಾಟಕ ಪ್ರದೇಶದ ಪೊಲೀಸ್ ಕಾನ್ಸ್ಟೇಬಲ್ ಸಿವಿಲ್(ಪುರುಷ, ಮಹಿಳಾ, ತೃತೀಯ ಲಿಂಗಿಗಳು), ಸೇವಾ ನಿರತ, ಬ್ಯಾಕ್ಲ್ಯಾಗ್ 454 ಹುದ್ದೆಗಳಿಗೆ ಡಿಸೆಂಬರ್ 10 ರಂದು ಬೆಳಗ್ಗೆ 11 ರಿಂದ 12:30 ರವರೆಗೆ ಪರೀಕ್ಷೆ ನಡೆಯಲಿದೆ.
ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯನಗರ ಜಿಲ್ಲೆಗಳ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಲಿದೆ. ಲಿಖಿತ ಪರೀಕ್ಷೆಗೆ ಅರ್ಹರಾದ ಅಭ್ಯರ್ಥಿಗಳಿಗೆ ಕರೆ ಪತ್ರದ ಬಗ್ಗೆ ಎಸ್ಎಂಎಸ್ ಮೂಲಕ ಮಾಹಿತಿ ನೀಡಲಾಗುವುದು. ಅಲ್ಲದೆ, ಲಿಂಕ್ ಕೂಡ ಕಳುಹಿಸಲಿದ್ದು, ಅಭ್ಯರ್ಥಿಗಳು ಕರೆ ಪತ್ರ ಡೌನ್ಲೋಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗುವಂತೆ ನೇಮಕಾತಿ ವಿಭಾಗದ ಡಿಐಜಿ ಯಡಾ ಮಾರ್ಟಿನ್ ತಿಳಿಸಿದ್ದಾರೆ.