ಬೆಂಗಳೂರು: ರಾಜ್ಯದಲ್ಲಿ 9432 ಪೊಲೀಸ್ ಹುದ್ದೆಗಳು ಖಾಲಿ ಇದ್ದು, ಪ್ರಸ್ತುತ 3484 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ನಂತರ 1,500 ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಪ್ರಸಕ್ತ ಸಾಲಿನಲ್ಲಿ 5000 ಹುದ್ದೆಗಳ ನೇಮಕಾತಿ ಮಾಡಿಕೊಳ್ಳಲಿದ್ದು, ನಂತರ 4 ಸಾವಿರ ಪೋಲಿಸ್ ಹುದ್ದೆಗಳು ಖಾಲಿ ಉಳಿಯಲಿವೆ ಎಂದು ವಿಧಾನಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಪ್ರೀತಮ್ ಗೌಡ ಪ್ರಶ್ನೆಗೆ ಉತ್ತರಿಸಿದ್ದಾರೆ.
ರಾಜ್ಯದಲ್ಲಿ ಮಂಜೂರಾದ 59,067 ಹುದ್ದೆಗಳಿದ್ದು, 49,635 ಮಂದಿ ಇದ್ದಾರೆ. 9432 ಹುದ್ದೆಗಳು ಖಾಲಿ ಉಳಿದಿದೆ. ಶೀಘ್ರವೇ 5000 ಪೆದೆಗಳ ನೇಮಕಾತಿ ನಡೆಯಲಿದೆ ಎಂದರು.