ಬೆಂಗಳೂರು: ಸಹಾಯದ ನೆಪದಲ್ಲಿ ಅಪ್ರಾಪ್ತೆಯನ್ನು ಮನೆಗೆ ಕರೆದೊಯ್ದು ಅತ್ಯಾಚಾರ ಎಸಗಿದ ಆರೋಪದ ಮೇಲೆ ಗೋವಿಂದರಾಜನಗರ ಠಾಣೆಯ ಪೊಲೀಸ್ ಕಾನ್ಸ್ ಟೇಬಲ್ ನನ್ನು ಬಂಧಿಸಲಾಗಿದೆ.
ಚಾಮರಾಜನಗರ ಮೂಲದ ಯುವಕನನ್ನು ಪ್ರೀತಿಸುತ್ತಿದ್ದ ಅಪ್ರಾಪ್ತೆ ಜುಲೈ 27 ರಂದು ಮನೆ ಬಿಟ್ಟು ಬಂದಿದ್ದು, ಪಾರ್ಕ್ ಸಮೀಪ ಓಡಾಡುತ್ತಿದ್ದಳು. ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್ ಕಾನ್ಸ್ ಟೇಬಲ್ ಆಕೆಯನ್ನು ಪ್ರಶ್ನಿಸಿದಾಗ ಚಾಮರಾಜನಗರಕ್ಕೆ ಹೋಗಬೇಕಿದೆ ಎಂದು ಹೇಳಿದ್ದಾಳೆ. ಡ್ರಾಪ್ ಕೊಡುವುದಾಗಿ ನಂಬಿಸಿದ ಪೊಲೀಸ್ ಕಾನ್ಸ್ ಬಲ್ ತನ್ನ ಬಾಡಿಗೆ ಮನೆಗೆ ಕರೆದುಕೊಂಡು ಅತ್ಯಾಚಾರ ಎಸಗಿದ್ದಾನೆ. ಬಳಿಕ ಚಾಮರಾಜನಗರ ಬಸ್ ಹತ್ತಿಸಿ ಕಳುಹಿಸಿದ್ದಾನೆ. ಮನೆಗೆ ತೆರಳಿದ ನಂತರ ಹುಡುಗಿ ವಿಷಯ ತಿಳಿಸಿದ್ದು, ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಆರೋಪಿ ಪೊಲೀಸ್ ಕಾನ್ಸ್ ಟೇಬಲ್ ನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ.