alex Certify ಅವಧಿ ಮುಗಿದ ತಿಂಡಿ ಪ್ಯಾಕೇಟ್ ಮೇಲೆ ಹೊಸ ಅವಧಿ ದಿನಾಂಕ ಮುದ್ರಿಸಿ ಮಾರಾಟ; ಗೋಡೌನ್ ಮೇಲೆ ಪೊಲೀಸರ ದಾಳಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅವಧಿ ಮುಗಿದ ತಿಂಡಿ ಪ್ಯಾಕೇಟ್ ಮೇಲೆ ಹೊಸ ಅವಧಿ ದಿನಾಂಕ ಮುದ್ರಿಸಿ ಮಾರಾಟ; ಗೋಡೌನ್ ಮೇಲೆ ಪೊಲೀಸರ ದಾಳಿ

ಬೆಂಗಳೂರು: ಅವಧಿ ಮುಗಿದ ತಿಂಡಿ, ತಿನಿಸುಗಳ ಪ್ಯಾಕೇಟ್ ಮೇಲೆ ಹೊಸ ಎಕ್ಸ್ ಪೈರ್ ಡೇಟ್ ಮುದ್ರಿಸಿ ಮಾರಾಟ ಮಾಡುತ್ತಿದ್ದ ಪ್ರಕರಣ ಬೆಂಗಳೂರಿನ ಉತ್ತರ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

ಈ ಪ್ರಕರಣ ಸಂಬಂಧ ಗೋಪಾಲಪುರದ ಬಳಿಯ ಗೋಡೌನ್ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ರೋಹಿತ್ ಫರ್ನಾಂಡೀಸ್ ಎಂಬಾತ ಗೋಡೌನ್ ಬಾಡಿಗೆಗೆ ಪಡೆದು ಹಣದ ಆಸೆಗಾಗಿ ಅವಧಿ ಮುಗಿದ ತಿಂಡಿಗಳ ಪ್ಯಾಕೆಟ್ ಮೇಲೆ ಹೊಸ ಅವಧಿ ದಿನಾಂಕ ಮುದ್ರಿಸಿ ಮಾರಾಟ ಮಾಡುತ್ತಿದ್ದ. ಥಿನ್ನರ್ ಹಾಗೂ ಕೆಮಿಕಲ್ ಸಹಾಯದಿಂದ ಹೊಸ ಎಕ್ಸ್ ಪೈರಿ ಡೇಟ್ ಮುದ್ರಣ ಮಾಡಲಾಗುತ್ತಿತ್ತು.

ಸ್ಥಳೀಯರ ದೂರಿನ ಹಿನ್ನೆಲೆಯಲ್ಲಿ ಗೋಡೌನ್ ಮೇಲೆ ದಾಳಿ ನಡೆಸಿದ ಪೊಲೀಸರು, ಗೋಡೌನ್ ಮ್ಯಾನೇಜರ್ ವೆಂಕಟೇಶ್ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಪೊಲೀಸರು ದಾಳಿ ನಡೆಸುತಿದ್ದಂತೆ 15ಕ್ಕೂ ಹೆಚ್ಚು ಕಾರ್ಮಿಕರು ಸ್ಥಳದಿಂದ ಪರಾರಿಯಾಗಿದ್ದಾರೆ.

ದಾಳಿ ವೇಳೆ ಅಪಾರ ಪ್ರಮಾಣದ ಆಹಾರದ ಪ್ಯಾಕೇಟ್, ಹಲವು ಉಪಕರಣಗಳನ್ನು ವಶಕ್ಕೆ ಪಡೆಯಲಾಗಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...