
ಸಂಸದ ಪ್ರಜ್ವಲ್ ರೇವಣ್ಣ ಅವರ ರಾಸಲೀಲೆ ಇರುವ ಪೆನ್ ಡ್ರೈವ್ ಹೊಂದಿದ್ದರೆನ್ನಲಾದ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ಮನೆಗೆ ರಕ್ಷಣೆಗಾಗಿ ಇಬ್ಬರು ಪೊಲೀಸರನ್ನು ನಿಯೋಜಿಸಲಾಗಿದೆ.
ಹಾಸನ ಜಿಲ್ಲೆ ಹೊಳೆನರಸೀಪುರ ಸಮೀಪದ ಕಡವಿನ ಕೋಟೆಯಲ್ಲಿರುವ ಕಾರ್ತಿಕ್ ಮನೆಗೆ ಪೊಲೀಸರನ್ನು ಈಗ ನಿಯೋಜಿಸಲಾಗಿದ್ದು, ಆದರೆ ಕಾರ್ತಿಕ್ ಅಲ್ಲಿಲ್ಲವೆಂದು ಹೇಳಲಾಗಿದೆ.
ಪ್ರಜ್ವಲ್ ರೇವಣ್ಣ ಮಾಜಿ ಕಾರ್ ಚಾಲಕ ಕಾರ್ತಿಕ್ ನನ್ನು ಮಲೇಷಿಯಾಗೆ ಕಳುಹಿಸಿಕೊಡಲಾಗಿದೆ ಎಂದು ಈ ಹಿಂದೆ ಎಚ್ ಡಿ ಕುಮಾರಸ್ವಾಮಿಯವರು ಆರೋಪಿಸಿದ್ದು, ಆದರೆ ಟಿವಿ ಮಾಧ್ಯಮ ಒಂದರಲ್ಲಿ ಪ್ರತ್ಯಕ್ಷರಾಗಿದ್ದ ಕಾರ್ತಿಕ್, ನನ್ನ ಬಳಿ ಪಾಸ್ಪೋರ್ಟ್ ಸಹ ಇಲ್ಲ. ನಾನು ಹೇಗೆ ಮಲೇಷಿಯಾಗೆ ಹೋಗಲಿ ಎಂದು ಪ್ರಶ್ನಿಸಿದ್ದರು.