ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಚಿತ್ರದುರ್ಗದ ಮುರುಘಾ ಮಠದ ಮುರುಘಾ ಶರಣರು ಜೈಲು ಪಾಲಾಗಿದ್ದಾರೆ. ಈ ಪ್ರಕರಣದ 5 ನೇ ಆರೋಪಿ ಗಂಗಾಧರಯ್ಯ ತನಿಖಾಧಿಕಾರಿ ಎದುರು ಶರಣಾಗಿದ್ದಾರೆ.
ಬೆಳಿಗ್ಗೆ ಸ್ವಇಚ್ಛೆಯಿಂದ ಡಿವೈಎಸ್ಪಿ ಅನಿಲ್ ಕುಮಾರ್ ಮುಂದೆ ಗಂಗಾಧರಯ್ಯ ಹಾಜರಾಗಿದ್ದು, ಸಂಜೆವರೆಗೆ ವಿಚಾರಣೆ ನಡೆಸಿ ನೋಟಿಸ್ ನೀಡಿ ಪೊಲೀಸರು ಕಳುಹಿಸಿದ್ದಾರೆ. ವಿಚಾರಣೆಗೆ ಬರುವಾಗ ಕರೆದಾಗ ಬರುವಂತೆ ಡಿವೈಎಸ್ಪಿ ಅನಿಲ್ ಕುಮಾರ್ ಸೂಚನೆ ನೀಡಿ ಕಳಿಸಿದ್ದಾರೆ ಎಂದು ಚಿತ್ರದುರ್ಗ ಪೊಲೀಸ್ ವರಿಷ್ಠಾಧಿಕಾರಿ ಕೆ ಪರಶುರಾಮ್ ಮಾಹಿತಿ ನೀಡಿದ್ದಾರೆ.